Home Posts tagged V4News (Page 597)

ಬೈಕ್ ನಲ್ಲಿ ಗಾಂಜಾ ಸಾಗಾಟ : ಓರ್ವ ಬಂಧನ, ಇನ್ನೋರ್ವ ಪರಾರಿ

ಉಳ್ಳಾಲ: ಬೈಕಿನಲ್ಲಿ ಗೋಣಿಚೀಲದಲ್ಲಿ ರೂ.40,000 ಮೌಲ್ಯದ ಗಾಂಜಾ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ತಲಪಾಡಿ ತಚ್ಚಣಿ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಂಜೇಶ್ವರ ಸುಂಕದಕಟ್ಟೆಯ ಮೊಹಮ್ಮದ್ ರಾಝಿಕ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಅಸ್ಗರ್

ಗಾಂಧಿ ವಿಚಾರ ವೇದಿಕೆಯಿಂದ ಮಿನುಗು ನೋಟ ಅನಾವರಣ ಕಾರ್ಯಕ್ರಮ

ಗಾಂಧಿ ವಿಚಾರ ವೇದಿಕೆ ವತಿಯಿಂದ ಮಿನುಗು ನೋಟ ಎಮ್.ಜಿ. ಹೆಗ್ಡೆಯವರು ಬರೆದಿರುವ ಗಾಂಧೀಜಿಯವರ ಕುರಿತ ಪ್ರಶ್ನೆಗಳಿಗೆ ಉತ್ತರದ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಜನವರಿ 15ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕದ್ರಿಯಲ್ಲಿರುವ ಲಯನ್ಸ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀಧರ್ ಜಿ. ಭಿಡೆ ವಹಿಸಲಿದ್ದಾರೆ. ಪುಸ್ತಕವನ್ನು ಪ್ರಸಿದ್ಧ ಅಂಕಣಕಾರರಾದ ಸುಧೀಂದ್ರ ಕುಲಕರ್ಣಿ ಅವರು ಅನಾವರಣ ಮಾಡಲಿದ್ದಾರೆ.

ಬಿರುವೆರ್ ಕುಡ್ಲ ಪೈವಳಿಕೆ ಘಟಕ ಲೋಕಾರ್ಪಣೆ

ನೂತನವಾಗಿ ಲೋಕಾರ್ಪಣೆಯಾದ ಬಿರುವೆರ್ ಕುಡ್ಲ( ರಿ) ಪೈವಳಿಕೆ ಘಟಕ ಕಾಸರಗೋಡು ಜಿಲ್ಲೆ ಇದರ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭವು ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಯಿಕಟ್ಟೆಯಲ್ಲಿ ಅದ್ದೂರಿಯಾಗಿ ನಡೆಯಿತು. ಇದರ ಸಲುವಾಗಿ ಶ್ರೀ ಮಹಾಗಣಪತಿ ದೇವರಿಗೆ ಗಣಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ (ರಿ ) ಇದರ ಸ್ಥಾಪಕಾಧ್ಯಕ್ಷರಾದ ಉದಯ ಪೂಜಾರಿ ಬಳ್ಳಾಲ್ ಬಾಗ್

ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದಿಂದ ಪ್ರತಿಭಟನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದುಡಿಯುತ್ತಿರುವ ಆಂಟನಿ ವೇಸ್ಟ್ ಮ್ಯಾನೆಜ್‍ಮೆಂಟ್ ನ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಪೂರೈಸುವಂತೆ ಆಗ್ರಹಿಸಿ ಸಫಾಯಿ ಕರ್ಮಾಚಾರಿ ಕಾರ್ಮಿಕರು ಇಂದು ಕುಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಆಂಟನೀ ವೇಸ್ಟ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ದುಡಿಯುತ್ತಿರುವ ಕೆಲಸಗಾರರಿಗೆ ಸಿಗಬೇಕಾದ ಬೋನಸ್ಸು, ಭತ್ಯೆ, ವಿಶೇಷ ರಜಾ ವೇತನ ಕನಿಷ್ಟ ವೇತನ ಮತ್ತು ವಿಡಿಎ, ಬೆಳಗಿನ ಉಪಹಾರ ಭತ್ತೆ, ಇತ್ಯಾದಿ ಬೇಡಿಕೆ

ಕುತ್ತಾರು , ಬೈಕ್ ಅಪಘಾತ : ಮಿದುಳು ನಿಷ್ಕ್ರಿಯ, ಕುಟುಂಬಸ್ಥರಿಂದ ಅಂಗಾಂಗ ದಾನ

ಉಳ್ಳಾಲ: ಕುತ್ತಾರು ದೇವಸ್ಥಾನ ಬಳಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತೊಕ್ಕೊಟ್ಟು ಸೇವಂತಿಗುತ್ತು ನಿವಾಸಿ ಭೂಷಣ್ ರೈ ಮಿದುಳು ನಿಷ್ಕ್ರಿಯಗೊಂಡಿದ್ದು, ಮನೆಮಂದಿ ಅಂಗಾಂಗ ದಾನ ನಡೆಸಲು ಮುಂದಾಗಿದ್ದಾರೆ. ಅಪಘಾತ ನಂತರ ಅವರನ್ನು ದೇರಳಕಟ್ಟೆ ಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಗಾಯಾಳು ಮಿದುಳು

ಅತ್ಯಂತ ಮೌಲಿಕ ಚಿಂತನೆಗೆ ಸಾಹಿತ್ಯ ಸಂವಾದ ಸಾಕ್ಷಿ

ಗೋಕಾವಿ ಗೆಳೆಯರ ಬಳಗ ಇಂದು ಮಂಗಳೂರಿನ ಬಹುಭಾಷೆಯ ಹಿರಿಯ ಕವಿ ಹಾಗೂ ಚಿಂತಕರಾದ ಶ್ರೀ ಮಹಮದ್ ಬಡ್ಡೂರ ಅವರೊಂದಿಗೆ ಸಿದ್ಧಾರ್ಥ ಲಲಿತ ಕಲಾ ಮಹಾವಿದ್ಯಾಲಯ ಗೋಕಾಕ ದಲ್ಲಿ ಸಾಹಿತ್ಯ ಸಂವಾದ ನಡೆಸಿತು.ಹಿರಿಯ ಸಾಹಿತಿ ಡಾ.ಅರ್ಜುನ ಪಂಗಣ್ಣವರ ಅಧ್ಯಕ್ಷತೆವಹಿಸಿ ಮಾತನಾಡಿದರು.ಹಿರಿಯ ರಂಗಕರ್ಮಿ ಈಶ್ವರಚಂದ್ರ ಬೆಟಗೇರಿ.ಡಾ.ಲಕ್ಷ್ಮಣ ಚೌರಿ.ಗಜಲ್ ಕವಿ ಈಶ್ವರ ಮಮದಾಪುರ.ಶಿಕ್ಷಕ ಬಸವರಾಜ ಹನಮಂತಗೋಳ.ತಮ್ಮ ಸಾಹಿತ್ಯ ಅನುಭವ ಹಂಚಿಕೊಂಡರು.ಲಿಮ್ಕಾ ವಿಶ್ವ ದಾಖಲೆಯ ಕಲಾವಿದ

ರಾಷ್ಟ್ರೀಯ ಯುವ ಜನೋತ್ಸವಕ್ಕಾಗಿ ಅವಳಿ ನಗರಕ್ಕೆ ಯುವ ಪ್ರತಿನಿಧಿಗಳ ಆಗಮನ : ಜಮ್ಮು – ಕಾಶ್ಮೀರದ ಮೊದಲ ತಂಡಕ್ಕೆ ಅದ್ದೂರಿ ಸ್ವಾಗತ

ಧಾರವಾಡ, ಜ, 8; ಅವಳಿ ನಗರದಲ್ಲಿ ಜ.12 ರಿಂದ 16 ರ ವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರತಿನಿಧಿಗಳ ಆಗಮನ ಆರಂಭಗೊಂಡಿದ್ದು, ಇಂದು ಭಾರತದ ಮುಕುಟ ಪ್ರಾಯ ರಾಜ್ಯ ಜಮ್ಮು ಕಾಶ್ಮೀರದಿಂದ ಮೊದಲ ತಂಡ ಆಗಮಿಸಿತು. ಯುವ ಪ್ರತಿನಿಧಿಗಳು ಮತ್ತು ತಂಡದ ನಾಯಕರನ್ನೊಳಗೊಂಡ 80 ಸದಸ್ಯರ ತಂಡಕ್ಕೆ ಅದ್ದೂರಿ ಮತ್ತು ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಕೆ.ಸಿ.ಡಿ ಕಾಲೇಜಿನ ಆವರಣದಲ್ಲಿ ಯುವ ಜನೋತ್ಸವದ ವಸತಿ ಉಸ್ತುವಾರಿ ಅಧಿಕಾರಿ ಹಾಗೂ ಕರ್ನಾಟಕ ವಿಶ್ವ

ಕುತ್ತಾರು : ಡಿವೈಡರ್ ಗುದ್ದಿದ ಬೈಕ್,ಸವಾರ ಗಂಭೀರ ಗಾಯ

ಉಳ್ಳಾಲ: ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಗೆ ಬರುತ್ತಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದ ಘಟನೆ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಸಮೀಪ ಸಂಭವಿಸಿದೆ. ಚೆಂಬುಗುಡ್ಡೆ ಕೆರೆಬೈಲು ನಿವಾಸಿ ಭೂಷಣ್ ರೈ (20) ಗಾಯಾಳು. ಕಲ್ಲಾಪು ಬುರ್ದುಗೋಳಿ ಕೋಲದಲ್ಲಿ ಭಾಗವಹಿಸಿದ್ದ ಇವರು ಬೈಕಿನಲ್ಲಿ ಕುತ್ತಾರಿನತ್ತ ಬರುವ ಸಂದರ್ಭ ಬೈಕ್ ಡಿವೈಡರಿಗೆ ಬಡಿದಿದ್ದು, ಪರಿಣಾಮ ಭೂಷಣ್ ಇನ್ನೊಂದು ರಸ್ತೆಗೆ ಎಸೆಯಲ್ಪಟ್ಟಿದ್ದರು. ತಲೆಗೆ

ಕಡಲ ತಡಿಯಲ್ಲಿ ಕಾಣಿಸಿಕೊಂಡ ಎಮ್.ಎಸ್ ಧೋನಿ

ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಕ್ರಿಕೆಟ್ ಅಟಗಾರ ಎಮ್ ಎಸ್ ಧೋನಿ ಕಾಣಿಸಿಕೊಂಡಿದ್ರು.ಕಾಸರಗೋಡಿನ ಬೇಕಲ್ ಪೆÇರ್ಟ್ ನಲ್ಲಿ ಬುಕ್ ರೀಲಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗಮಿಸಿದ್ದರು. ಧೋನಿ ಜೊತೆಗೆ ಸೆಲ್ಪಿಗಾಗಿ ಅಭಿಮಾನಿಗಳು ಮುಗಿಸಿದ್ದರು ಭದ್ರತೆಯ ದೃಷ್ಟಿಯಿಂದ ಸೆಲ್ಪಿ ಪ್ರಿಯರಿಗೆ ನಿರಾಸೆ ಉಂಟಾಯಿತು…

ಮಣಿಪಾಲದಲ್ಲಿ ಎರಡನೇ ಅಂತರರಾಷ್ಟ್ರೀಯ ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಸಮ್ಮೇಳನ

ಮಣಿಪಾಲ, 7ನೇ ಜನವರಿ 23:2023 ರ ಜನವರಿ 7 ಮತ್ತು 8 ರಂದು ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲ, ಜಾಗತಿಕ ಕ್ಯಾನ್ಸರ್ ಒಕ್ಕೂಟ ಮತ್ತು ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳು ಜಂಟಿಯಾಗಿ ಎರಡನೇ ಅಂತರರಾಷ್ಟ್ರೀಯ ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಸಮ್ಮೇಳನವನ್ನು ಆಯೋಜಿಸಿದೆ. ಸಮ್ಮೇಳನದಲ್ಲಿ 200 ಕ್ಕೂ ಹೆಚ್ಚು ದೇಶ ವಿದೇಶಗಳ ಪ್ರತಿನಿಧಿಗಳು ಮತ್ತು ಸಂಪನ್ಮೂಲ ವ್ಯಕಿಗಳು ಭಾಗವಹಿಸಿದ್ದಾರೆ.