Home Posts tagged V4News (Page 646)

ಬಾವುಟಗುಡ್ಡೆ : ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ‌ ಪ್ರತಿಮೆ ಲೋಕಾರ್ಪಣೆ

ಮಂಗಳೂರು : ನಗರದ ಬಾವುಟಗುಡ್ಡೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ‌ ಪ್ರತಿಮೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನ.19ರ ಶನಿವಾರ ಲೋಕಾರ್ಪಣೆ ಮಾಡಿದರು.ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿದ್ಯ

ಪೆರುವಾಜೆ : ಗ್ರಾಮವಾಸ್ತವ್ಯ ಕಾರ್ಯಕ್ರಮ

ಸುಳ್ಯ ತಾಲೂಕು ಆಡಳಿತ ವತಿಯಿಂದ ಮತ್ತು ಸುಳ್ಯ ತಾಲೂಕು ವಿವಿಧ ಇಲಾಖಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಪೆರುವಾಜೆಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾಮ ವಾಸ್ತವ್ಯದ ಅಧ್ಯಕ್ಷತೆಯನ್ನು ಜಗನಾಥ ಪೂಜಾರಿ ವಹಿಸಿದ್ದರು. ತಹಸೀಲ್ದಾರ್ ರಾದ ಶ್ರೀ. ಅನಿತಲಕ್ಷ್ಮಿ ದೀಪಬೆಳಗಿಸುವ ಮೂಲಕ ಗ್ರಾಮ ಸಭೆಗೆ ಚಾಲನೆ ನೀಡಿದ್ದರು . ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಇಒ ಭಾವನಿಶಂಕರ್ ಕೇತ್ರ ಶಿಕ್ಷಣಧಿಕಾರಿ ಮಹದೇವ್ ತಾಲೂಕು ಹೆಲ್ತ್ ಆಫೀಸರ್ ನಂದಕುಮಾರ್,

ಉಳ್ಳಾಲ : ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ವಾಹನವನ್ನು ಕಿತ್ತುಕೊಂಡು ಪರಾರಿ

ಮಂಜೇಶ್ವರ ಮೂಲದ ಪ್ರಪುಲ್‍ರಾಜ್ ಹಲ್ಲೆಗೊಳಗಾದ ಯುವಕ. ಈತ ಮಂಜೇಶ್ವರದಿಂದ ದ್ವಿಚಕ್ರ ವಾಹನದಲ್ಲಿ ಹೊರಟು ತನ್ನ ಕುತ್ತಾರ್‌‌ನಲ್ಲಿರುವ ಅಜ್ಜಿ ಮನೆಗೆಂದು ಬರುತ್ತಿದ್ದಾಗ ರಾತ್ರಿ ವೇಳೆ ಅಂಬಿಕಾರೋಡ್ ತಲುಪಿದಾಗ 3 ಜನ ಅಪರಿಚಿತರು ವಾಹನ ನಿಲ್ಲಿಸಿ ಬಳಿಕ ಪ್ರಪುಲ್‍ರಾಜ್‍ಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನು ಗಂಭೀರ ಗಾಯಗೊಂಡ ಪ್ರಫುಲ್ ರಾಜ್ ತೊಕ್ಕೊಟು ಖಾಸಗಿ ಚಿಕಿತ್ಸೆಗೆ

ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ ಸಿಎಂ

ಮಂಗಳೂರು: ಮಂಗಳೂರಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಎ. ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಈ ಸಂದರ್ಭ ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ, ಶಾಸಕರಾದ ಡಾ. ಭರತ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು

ಇಂದಿನ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ರದ್ದು

ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟವು ಕೇಂದ್ರ ಸರ್ಕಾರದ ಸಂಧಾನದ ಬಳಿಕ ನವೆಂಬರ್ 19ರ ಇಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ಹಿಂತೆಗೆದುಕೊಂಡಿದೆ. ಉದ್ಯೋಗ ಕಡಿತ, ಏಕಪಕ್ಷೀಯ ವರ್ಗಾವಣೆ, ಹೊರಗುತ್ತಿಗೆ, ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮತ್ತು ಬ್ಯಾಂಕಿಂಗ್ ಸಂಘಟನೆಗಳ ಪದಾಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಸೆಂಟ್ರಲ್ ಬ್ಯಾಂಕ್ ಮುಂತಾದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಸಿಬ್ಬಂದಿ

 ಮತದಾರರ ಪಟ್ಟಿ ಪರಿಷ್ಕರಣೆ ದೂರಿನ ಬಗ್ಗೆ ತ್ವರಿತವಾಗಿ ವಿಚಾರಣೆ : ಸಿಎಂ ಬೊಮ್ಮಾಯಿ

ಅವರು ನಗರದ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಆಗಮಿಸಿದ ಸಂದರ್ಭದಲ್ಲಿಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ ಚುನಾವಣಾ ಸಂದರ್ಭದಲ್ಲಿ ನಡೆಯುವ ನಿರಂತರ ಪ್ರಕ್ರಿಯೆ. ಅದರಲ್ಲಿ ಲೋಪವಾಗಿರುವ ಬಗ್ಗೆ ಬಂದ ದೂರಿನ ಬಗ್ಗೆ ತ್ವರಿತವಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಎಸ್.ಅಂಗಾರ, ಅಶ್ವತ್ಥನಾರಾಯಣ, ಶಾಸಕ ವೇದವ್ಯಾಸ ಕಾಮತ್, ರಾಜೇಶ್

Kantara 50 ದಿನ ಪೂರೈಸಿದ ‘ಕಾಂತಾರ’ : ಶೀಘ್ರದಲ್ಲಿ ಒಟಿಟಿಯಲ್ಲಿ ರಿಲೀಸ್

‘ಕಾಂತಾರ’ ಕನ್ನಡದಲ್ಲಿ ಬಿಡುಗಡೆಯಾಗಿ 50 ದಿನ ಪೂರ್ಣಗೊಂಡಿದೆ​. ‘ಕಾಂತಾರ’ ಚಿತ್ರದ ಒಟ್ಟಾರೆ ಮೇಕಿಂಗ್, ದಕ್ಷಿಣ ಕನ್ನಡ ಸೊಗಡು, ಕಂಬಳ ಮತ್ತು ಪ್ರಮುಖವಾಗಿ ಭೂತ ಕೋಲ ವಿಷಯ ಜನರಿಗೆ ಇಷ್ಟವಾಗಿದೆ. ಜೊತೆಗೆ ನಿರ್ದೇಶಕ ರಿಷಬ್​ ಶೆಟ್ಟಿ, ನಟಿ ಸಪ್ತಮಿ ಗೌಡ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡರು. ‘ಕಾಂತಾರ’ ಚಿತ್ರ ಕನ್ನಡದಲ್ಲಿ ರಿಲೀಸ್ ಆದ ಬಳಿಕ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗತೊಡಗಿತು. ಬಳಿಕ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ

Indira Gandhi Birth Anniversary : ಇಂದುಇಂದಿರಾ ಗಾಂಧಿಯವರ 105ನೇ ಜನ್ಮದಿನ.

ಇಂದು ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ 105ನೇ ಜನ್ಮದಿನ. ಇಂದಿರಾ ಗಾಂಧಿಯವರು 1917ರಲ್ಲಿ ನವೆಂಬರ್ 19ರಂದು ಅಲಹಾಬಾದ್​​ನಲ್ಲಿ ಜನಿಸಿದರು. ಇಂದಿರಾ ಗಾಂಧಿ (Indira Gandhi) ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮಗಳು. ಅವರ ತಾಯಿ ಕಮಲಾ ನೆಹರು ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕಿಯಾಗಿದ್ದರು. ಇಂದಿರಾ ಗಾಂಧಿಯವರು ತಮ್ಮ ತಂದೆ ಜವಾಹರಲಾಲ್ ನೆಹರು

ಬಿ.ಎಸ್.ಪಿ . ಜಿಲ್ಲಾ ಅಧ್ಯಕ್ಷ ದಾಸಪ್ಪ ಎಡಪದವು‌ ನಿಧನ

ಮಂಗಳೂರು : ಬಹುಜನ ಸಮಾಜ ಪಕ್ಷ( ಬಿಎಸ್ಪಿ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ದಾಸಪ್ಪ ಎಡಪದವು (63)ಅವರು ಇಂದು ನಿಧನರಾದರು.ಇಂದು ಮುಂಜಾನೆ ಗುರುಪುರದ ತನ್ನ ನಿವಾಸದಲ್ಲಿ ಹೃದಯಾಘಾತದಿಂದ ದಾಸಪ್ಪ ಅವರು ನಿಧನರಾದರು.ಗುರುಪುರ ದಲಿತ ಅಭಿವೃದ್ಧಿ ಸಮಿತಿಯ ಸ್ಥಾಪಕರಾಗಿದ್ದ ದಾಸಪ್ಪ ಅವರು , ಭೌದ್ಧ ಧರ್ಮದ ಅನುಯಾಯಿಯಾಗಿದ್ದರು. ಬಹುಜನ ಸಮಾಜ ಸಂಘಟನೆಯ ಸಲುವಾಗಿ ರಾಜ್ಯವ್ಯಾಪಿಯಾಗಿ ದಾಸಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದರು.ಮೃತರು ಪತ್ನಿ ಹಾಗೂ ನಾಲ್ವರು

ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಕಡಬದಿಂದ ಹದಿನೈದು ಸಾವಿರ ಜನ, ನೂರಕ್ಕೂ ಹೆಚ್ಚು ವಾಹನ: ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಹೇಳಿಕೆ

ಮಂಗಳೂರಿನ ಭಾವುಟ ಗುಡ್ಡೆಯಲ್ಲಿ ನಿರ್ಮಾಣವಾಗಿರುವ ಸ್ವಾತಂತ್ಯಯ ಹೋರಾಟಗಾರ ಸಮರ ವಿರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕಡಬ ತಾಲೂಕಿನಿಂದ 15,000 ಮಿಕ್ಕಿಜನ ಸುಮಾರು ನೂರಕ್ಕಿಂತ ಹೆಚ್ಚು ವಾಹನಗಳಲ್ಲಿ ತೆರಳಲಿದ್ದಾರೆ ಎಂದು ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಹೇಳಿದರು. ಅವರು ಕಡಬ ಗೌಡ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.