Home Posts tagged V4News (Page 656)

ಬಂಟ್ಸ್ ಬಹರೈನ್ ಪದಗ್ರಹಣಾ ಕಾರ್ಯಕ್ರಮ : ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿ

ಬಹರೈನ್; “ತಾನು ಕರಗಿ ಇತರರರಿಗೆ ಬೆಳಕು ಕೊಡುವ ಮೇಣದ ಬತ್ತಿಯಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಸಾರ್ಥಕೆಯನ್ನು ಕಾಣಬಹುದು . ಮಕ್ಕಳಿಗೆ ಮಾತೃ ಭಾಷೆಯನ್ನೂ ಕಳಿಸಿದಾಗ ಮಾತ್ರ ನಮ್ಮ ಸಂಸ್ಕ್ರತಿ ಉಳಿದು ಬೆಳೆಯಲು ಸಾಧ್ಯ . ನಾವು ಆರ್ಥಿಕವಾಗಿ ಬೆಳೆದಂತೆಲ್ಲಾ ಸಮಾಜವನ್ನೂ ಬೆಳೆಸಬೇಕು “ಎಂದು ಇಲ್ಲಿ ಇತ್ತೀಚಿಗೆ ಜರುಗಿದ ಬಂಟ್ಸ್

ಅಲೆಮಾರಿ ಜನಾಂಗದ ಶ್ರೇಯಸ್ಸಿಗಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ್ ದಾಸ್ ಎಕ್ಕಾರು ನಿಧನ

ಧರ್ಮ ಜಾಗರಣ ಸಮನ್ವಯ ಪರಿಯೋಜನಾ ಪ್ರಮುಖ್ ಭಾಸ್ಕರ ದಾಸ್ ಎಕ್ಕಾರು (66) ಹಾಸನದಲ್ಲಿ ಶನಿವಾರ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ,   ಶನಿವಾರ ಬೆಂಗಳೂರಿನಿಂದ ಮಂಗಳೂರಿಗೆ ತಮ್ಮ ಇನೋವಾ ವಾಹನದಲ್ಲಿ ವಾಪಾಸ್ಸಾಗುವ ಸಂದರ್ಭ ಕುಣಿಗಲ್ ನಲ್ಲಿ ಬಾಸ್ಕರ್ ದಾಸ್ ಅವರು ಸಂಚರಿಸುತ್ತಿದ್ದ ವಾಹನಕ್ಕೆ ಎಮ್ಮೆಯೊಂದು ಅಡ್ದ ಬಂದ್ದಿದೆ. ಕೂಡಲೇ ಚಾಲಕ ಅಪಘಾತ ತಪ್ಪಿಸಲು ಚಾಲ ಕೂಡಲೇ ಬ್ರೇಕ್ ಹಾಕಿದ್ದು ಈ ಸಂದರ್ಭ ತಮ್ಮ ವಾಹನಕ್ಕೆ ಹಿಂಬದಿಯಿಂದ ಬಂದ ಮಿನಿ ಬಸ್ ಡಿಕ್ಕಿ

ಮುಖ್ಯಮಂತ್ರಿ ಆಗಮನ ಹಿನ್ನಲೆ ಕಾಪುವಿನಲ್ಲಿ ವ್ಯಾಪಾರಿಗಳಿಗೆ ಸಮಸ್ಯೆ ಇಲ್ಲ : ಎಸ್. ಅಂಗಾರ

ಕಾಪುವಿನಲ್ಲಿ ನಡೆಯಲಿರುವ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು ಬರುವವರಿದ್ದು, ಕಾರ್ಯಕ್ರಮ ಕಾಪುವಿನಲ್ಲಿ ನಡೆಯುತ್ತಿದ್ದರೂ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆಯಾಗದು ಎಂಬುದಾಗಿ ಉಸ್ತುವಾರಿ ಸಚಿವ ಅಂಗಾರ ಹೇಳಿದರು.ಅವರು ಕಾಪುವಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಇದು ಪಕ್ಷದ ಕಾರ್ಯಕ್ರಮ ಆಗಿದ್ದು ಪೇಟೆ ಒಳಭಾಗದಲ್ಲಿ ನಡೆಯುತ್ತಿದ್ದರೂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು

ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪಿಎಫ್‍ಐ, ಎಸ್‍ಡಿಪಿಐ ಮುಖಂಡರ ಮನೆ ಮೇಲೆ ದಾಳಿ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಜ್ಯದ ಹಲವೆಡೆ ಪಿಎಫ್‍ಐ, ಎಸ್ಡಿಪಿಐ ಮುಖಂಡರ ಮನೆಗಳ ಮೇಲೆ ಎನ್‍ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವಡೆ ನಿಷೇಧಿತ ಪಿಎಫ್‍ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ಎನ್‍ಐಎ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.

ದೇರೇಬೈಲ್‍ನಲ್ಲಿ ಕೇದಾರ್ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

ಐಶಾರಾಮಿ ಹಾಗೂ ಕೈಗೆಟಕುವ ದರದಲ್ಲಿ ಮನೆಗಳನ್ನು ನಿರ್ಮಿಸಿ ಗ್ರಾಹಕರಿಗೆ ಹಸ್ತಾಂತರಿಸುತ್ತಿರುವ ಮುಕುಂದ್ ಎಂಜಿಎಂ ರಿಯಾಲ್ಟಿ' ಸಂಸ್ಥೆಯು ಇದೀಗ ನಗರದ ಜನತೆಗೆ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಅಪಾರ್ಟ್‍ಮೆಂಟ್ಕೇದಾರ್-ಹೈ ಲಿವಿಂಗ್ ಲಕ್ಶುರಿ ಹೋಮ್ಸ್’ ಎಂಬ ವಸತಿ ಸಮುಚ್ಚಯ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಮಂಗಳೂರಿನ ಜನತೆಯ ಆವಶ್ಯಕತೆಯನ್ನು ಮನಗಂಡಿರುವ `ಮುಕುಂದ್ ಎಂಜಿಎಂ ರಿಯಾಲ್ಟಿ’ ಸಂಸ್ಥೆಯು ಆಧುನಿಕ ಸೌಲಭ್ಯಗಳನ್ನು

ಅಪೂರ್ವ ಗೋಕುಲ್‍ದಾಸ್ ರಚಿಸಿದ ಕಾಂತಾರ ಸಿನಿಮಾದ ಪಂಜುರ್ಲಿ ಚಿತ್ರ

ಸುಳ್ಯ ತಾಲೂಕಿನ ವಿದ್ಯಾರ್ಥಿನಿ ಅಪೂರ್ವ ಗೋಕುಲ್‍ದಾಸ್ ರಚಿಸಿರುವ ಪಂಜುರ್ಲಿ ದೈವದ ಚಿತ್ರ ಎಲ್ಲರ ಗಮನ ಸೆಳೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡ ಚಲನ ಚಿತ್ರ ಕಾಂತಾರದಲ್ಲಿ ಮೂಡಿ ಬಂದ ಪಂಜುರ್ಲಿ ದೈವದ ಚಿತ್ರವನ್ನು ಅಪೂರ್ವ ಗೋಕುಲ್‍ದಾಸ್ ಮನಮೋಹಕವಾಗಿ ರಚಿಸಿ ಮೆಚ್ಚಿಗೆ ಗಳಿಸಿದ್ದಾಳೆ. ಅಪೂರ್ವ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಗೋಕುಲ್‍ದಾಸ್ ಅವರ ಪುತ್ರಿ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಎಂಟನೇ ತರಗತಿಯ

ಕೇರಳದ ಅನನ್ಯತೆ ಅರಸಿ ಗ್ರಾಮಗಳ ಪ್ರವಾಸದಲ್ಲಿರುವ ಯುವಕರು

ಮಂಜೇಶ್ವರ: ಜಗತ್ತಿನ ಮಲಯಾಳಿಗಳಿಗೆ ಕೇರಳದ ಬಗ್ಗೆ ವಿಭಿನ್ನ ಅಭಿವ್ಯಕ್ತಿ ನೀಡುವ ಹಾಗೂ ಕೇರಳವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಲಪ್ಪುರಂ ಜಿಲ್ಲೆಯ ಇಬ್ಬರು ಯುವಕರು ಕೇರಳದ ಅನನ್ಯತೆ ಅರಸಿ ಗ್ರಾಮಗಳ ಪ್ರವಾಸದ ಹೆಸರಿನಲ್ಲಿ ಕೇರಳದ ಉತ್ತರ ಭಾಗವಾದ ಗಡಿನಾಡ ಪ್ರದೇಶಕ್ಕೆ ತಲುಪಿದ್ದಾರೆ. ಕೇರಳ ಎಂದರೇನು ಎಂಬುದನ್ನು ತಿಳಿದುಕೊಳ್ಳಲು ಹಾಗೂ ಅಲ್ಲಿನ ಭಾಷೆ, ಸಂಸ್ಕೃತಿ, ಅಭಿರುಚಿ, ವಿವಿಧ ವ್ಯಾಪಾರ, ಕೃಷಿ, ಪ್ರವಾಸೋದ್ಯಮ ಮತ್ತಿತರ ಅಪರೂಪದ

ಬೆಳ್ಳಾರೆಯಲ್ಲಿ ನೂತನ ಅಯ್ಯಂಗಾರ ಬೇಕರಿ ಉದ್ಘಾಟನೆ

ಉತ್ತಮ ಗುಣಮಟ್ಟದ ಹಾಗೂ ಶುಚಿ ರುಚಿಯಾದ ವಿವಿಧ ರೀತಿಯ ತಿಂಡಿ ತಿನಿಸುಗಳ ಮಾರಾಟ ಮಳಿಗೆ “ಎಂ, ಟಿ, ಆರ್. ಐಯ್ಯಂಗಾರ್ ಬೇಕರಿ & ಸ್ವೀಟ್ಸ್ ಬೆಳ್ಳಾರೆಯಲ್ಲಿ ಶುಭರಂಭಗೊಂಡಿದೆ. ಶುಭ ಸಮಾರಂಭಗಳಿಗೆ ಬೇಕಾದ ಬೇಕರಿ ಉತ್ಪನ್ನ ಮತ್ತು ಸ್ವೀಟ್ಸ್ ಹೋಲ್ ಸೇಲ್ ದರದಲ್ಲಿ ಲಭ್ಯ. ಇಂದೇ ಸಂಪರ್ಕಿಸಿ. ಎಂ, ಟಿ, ಆರ್. ಐಯ್ಯಂಗಾರ್ ಬೇಕರಿ & ಸ್ವೀಟ್ಸ್ ಬಸ್ ನಿಲ್ದಾಣದ ಎದುರುಗಡೆ ಬೆಳ್ಳಾರೆ ಮೊಬೈಲ್: 9844829959, 7795381568. ಸಂಪರ್ಕಿಸಬಹುದು.

ಬೆಳ್ತಂಗಡಿ : ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ನೆರಿಯ ಗ್ರಾಮದ ಅರ್ಹ ಫಲಾನುಭವಿಗಳಿಗೆ ಕೆಲವು ಅಶಕ್ತರ ಮನೆಗೆ ಮನೆಯ ಹಕ್ಕು ಪತ್ರ ತಂದು ನೀಡಿದರು. ಹಕ್ಕು ಪತ್ರ ವಿತರಣಾ ಸಮಾರಂಭ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಕಾಳಿಕಾಂಬ ದೇವಸ್ಥಾನದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ನೆರಿಯ ಗ್ರಾಮದ ಹಲವಾರು ಕುಟುಂಬಗಳಿಗೆ ಹಕ್ಕುಪತ್ರ ಸಿಗದೆ 70 ವರ್ಷಗಳಿಂದ ಅಲೆದಾಡುತಿದ್ದರು ಆದರೆ ಈಗ ಹಕ್ಕು ಪತ್ರವನ್ನು ಅವರ

ಮೂಡುಬಿದಿರೆ: ಶೇಂದಿ ತೆಗೆಯುತ್ತಿದ್ದಾಗ ಮರದಿಂದ ಬಿದ್ದು ಸಾವು

ಮೂಡುಬಿದಿರೆ: ಶೇಂದಿ ತೆಗೆಯುತ್ತಿದ್ದಾಗ ತಾಳೆ ಮರದಿಂದ ಬಿದ್ದು ಮೂರ್ತೆದಾರ ಮೃತಪಟ್ಟ ಘಟನೆ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ನಡೆದಿದೆ. ವರ್ಣಬೆಟ್ಟು ಪಂಜಿಗುರಿಯ ನಿವಾಸಿ ಸುರೇಶ್ ಪೂಜಾರಿ(42ವ) ಸಾವನ್ನಪ್ಪಿದ ವ್ಯಕ್ತಿ. ಇವರು ಮಧ್ಯಾಹ್ನದ ವೇಳೆಗೆ ಶೇಂದಿ ತೆಗೆಯಲೆಂದು ಮನೆಯ ಹಿಂಭಾಗದಲ್ಲಿದ್ದ ತಾಳೆ ಮರಕ್ಕೆ ಹೋಗಿದ್ದರು. ಆದರೆ ಎಷ್ಟು ಹೊತ್ತಾದರೂ ಮನೆಗೆ ಮರಳಿ ಬಾರದಿರುವುದರಿಂದ ಮನೆಯವರು ಹುಡುಕಿಕೊಂಡು