ಅಲೆಮಾರಿ ಜನಾಂಗದ ಶ್ರೇಯಸ್ಸಿಗಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ್ ದಾಸ್ ಎಕ್ಕಾರು ನಿಧನ
ಧರ್ಮ ಜಾಗರಣ ಸಮನ್ವಯ ಪರಿಯೋಜನಾ ಪ್ರಮುಖ್ ಭಾಸ್ಕರ ದಾಸ್ ಎಕ್ಕಾರು (66) ಹಾಸನದಲ್ಲಿ ಶನಿವಾರ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ,
ಶನಿವಾರ ಬೆಂಗಳೂರಿನಿಂದ ಮಂಗಳೂರಿಗೆ ತಮ್ಮ ಇನೋವಾ ವಾಹನದಲ್ಲಿ ವಾಪಾಸ್ಸಾಗುವ ಸಂದರ್ಭ ಕುಣಿಗಲ್ ನಲ್ಲಿ ಬಾಸ್ಕರ್ ದಾಸ್ ಅವರು ಸಂಚರಿಸುತ್ತಿದ್ದ ವಾಹನಕ್ಕೆ ಎಮ್ಮೆಯೊಂದು ಅಡ್ದ ಬಂದ್ದಿದೆ.
ಕೂಡಲೇ ಚಾಲಕ ಅಪಘಾತ ತಪ್ಪಿಸಲು ಚಾಲ ಕೂಡಲೇ ಬ್ರೇಕ್ ಹಾಕಿದ್ದು ಈ ಸಂದರ್ಭ ತಮ್ಮ ವಾಹನಕ್ಕೆ ಹಿಂಬದಿಯಿಂದ ಬಂದ ಮಿನಿ ಬಸ್ ಡಿಕ್ಕಿ ಹೊಡೆದಿದೆ,
ಈ ಸಂದರ್ಭ ಮುಂಭಾಗದ ಸೀಟ್ ನಲ್ಲಿ ವಿಶ್ರಾಂತಿಯಲ್ಲಿದ್ದ ಭಾಸ್ಕರ ದಾಸ್ ಗಂಭೀರ ಗಾಯಗೊಂಡಿದ್ದರು ಕೂಡಲೇ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದ್ದು ಭಾನುವಾರ ಸಂಜೆ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರು ಪತ್ನಿ ಮತ್ತು ಮೂವರು ಗಂಡು ಮಕ್ಕಳು ಅಗಲಿದ್ದಾರೆ.