Home Posts tagged V4News (Page 674)

ಹೆಜಮಾಡಿ ಗ್ರಾ.ಪಂ.ನಿಂದ ಟೋಲ್ ಹೋರಾಟ ಹತ್ತಿಕ್ಕುವ ತಂತ್ರ : ದಲಿತ ಮುಖಂಡ ಶೇಖರ್ ಹೆಜಮಾಡಿ ಆರೋಪ

ಟೋಲ್ ವಿರುದ್ಧ ಹೋರಾಟಕ್ಕೆ ದಿನ ನಿಗದಿಯಾಗಿದ್ದರೂ ಅದೇ ದಿನ ಹೆಜಮಾಡಿ ಗ್ರಾ.ಪಂ. ಆಢಳಿತ ಮಂಡಳಿ ಗ್ರಾಮಸಭೆಗೆ ದಿನ ನಿಗದಿ ಪಡಿಸುವ ಮೂಲಕ ಟೋಲ್ ವಿರುದ್ಧ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದೆ ಎಂಬುದಾಗಿ ದಲಿತ ಮುಖಂಡ ಶೇಖರ್ ಹೆಜಮಾಡಿ ಆರೋಪಿಸಿದ್ದಾರೆ.ಟೋಲ್‍ನಿಂದಾಗಿ ಹೆಜಮಾಡಿಯ ಜನತೆ ಕೂಡಾ ಸಮಸ್ಯೆ ಅನುಭವಿಸುತ್ತಿದ್ದು, ಗ್ರಾ.ಪಂ. ಜನಪರ ಹೋರಾಟಕ್ಕೆ

ಬಾಲಕಿ ನಾಪತ್ತೆ ಪ್ರಕರಣ : ಪತ್ತೆಗೆ ಮನವಿ

ಮಂಗಳೂರಿಗೆ ಬಂದಿದ್ದ ಬೆಂಗಳೂರು ಮಹಾಲಕ್ಷ್ಮೀ ಲೇಔಟ್ ಭಾರ್ಗವಿ (14) ನಾಪತ್ತೆಯಾಗಿದ್ದಾಳೆ. ಕಳೆದ ಸೋಮವಾರ ಈಕೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದು ಬಸ್ ಮೂಲಕ ಮುಂಜಾವ 3 ಗಂಟೆಗೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಳು.ಅಲ್ಲಿಂದ ರಿಕ್ಷಾದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಚಿಕ್ಕಮ್ಮನ ಮನೆಗೆ ಹೋಗುವುದಾಗಿ ರಿಕ್ಷಾ ಚಾಲಕನಲ್ಲಿ ಹೇಳಿರುವ ಮಾಹಿತಿ ಇದೆ. ಆದರೆ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡೆತ್ ನೋಟ್ ಬರೆದಿಟ್ಟು ಬಾಲಕ ಆತ್ಮಹತ್ಯೆ

ಹತ್ತನೇ ತರಗತಿ ಬಾಲಕನೋರ್ವ “ನಾನು ಒತ್ತಡದಲ್ಲಿದ್ದೇನೆ ನನ್ನನ್ನು ಕ್ಷಮಿಸಿ ತಂದೆ ತಾಯಿ ಹಾಗೂ ಕೋಚ್ ಎಂಬುದಾಗಿ ಆಂಗ್ಲ ಬಾಷೆಯಲ್ಲಿ ಡೆತ್ ನೋಟ್ ಬರೆದಿಟ್ಟು ನಂದಿಕೂರು ಸಮೀಪ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೃತ ಬಾಲಕ ಬೆಳ್ಮಣ್ ಜಂತ್ರ ಸದಾಶಿವ ಆಚಾರ್ಯರ ಪುತ್ರ ಆದರ್ಶ್ ಆಚಾರ್ಯ(17), ನಾಲ್ವರು ಮಕ್ಕಳಲ್ಲಿ ಕೊನೆಯವನಾಗಿದ್ದ ಈತ ಸೂಡಾ ಸರ್ಕಾರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ಕಲಿಕೆಯಲ್ಲಿ ತರಗತಿಯಲ್ಲೇ ಪ್ರಥಮ

ಸಂಪೂರ್ಣವಾಗಿ ಹದಗೆಟ್ಟಿರುವ ಚಾಮರಾಜನಗರ ಹೆದ್ದಾರಿ : ರಸ್ತೆಯ ಗುಂಡಿ ಮುಚ್ಚುವಂತೆ ಒತ್ತಾಯಿಸಿ ಮನವಿ

ಚಾಮರಾಜನಗರ ಹೆದ್ದಾರಿಯು ಹದಗೆಟ್ಟುಹೋಗಿದ್ದ ಕುರಿತು ಸವಿವಿಸ್ತಾರವಾಗಿ ಸುದ್ದಿಯನ್ನ ಪ್ತಸಾರ ಮಾಡಲಾಗಿತ್ತು. ಸುದ್ದಿ ಬಿತ್ತರದ ಬೆನ್ನಲ್ಲೇ ಕರುನಾಡು ಯುವಶಕ್ತಿ ಸಂಘಟನಾ ಸದಸ್ಯರು ತಾಲೂಕು ಅಧ್ಯಕ್ಷ ಮುನೀರ್ ಪಾಷ ಅವರೊಂದಿಗೆ ಲೋಕೋಪಯೋಗಿ ಇಲಾಖೆಗೆ ತೆರಳಿ ರಸ್ತೆಯಲ್ಲಿನ ಗುಂಡಿಗಳನ್ನ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷರು ಈಶ್ವರ್ ಮಾತನಾಡಿದ ರಸ್ತೆಯ ಗುಂಡಿ ಮುಚ್ಚಲು ರಾಹುಲ್ ಗಾಂಧಿ, ಮೋದಿ, ಆಮಿತ್ ಶಾ ಅವರೇ

ಮೂಡುಬಿದಿರೆ : ಪ್ರಾಕೃತಿಕ ವಿಕೋಪದಡಿಯಲ್ಲಿ ಹಾನಿಯಾದ ಸಂತ್ರಸ್ಥರಿಗೆ ಪರಿಹಾರ

ಮೂಡುಬಿದಿರೆ: ಪ್ರಾಕೃತಿಕ ವಿಕೋಪದಡಿಯಲ್ಲಿ ಹಾನಿಗೊಳಗಾಗಿರುವ ಮೂಡುಬಿದಿರೆ ತಾಲೂಕಿನ ಒಟ್ಟು 16 ಜನ ಸಂತ್ರಸ್ತರಿಗೆ ರೂ 7,10,700ರೂ. ಮೊತ್ತದ ಪರಿಹಾರದ ಚೆಕ್‌ನ್ನು ಶಾಸಕ ಉಮಾನಾಥ್ ಕೋಟ್ಯಾನ್ ಆಡಳಿತ ಸೌಧದಲ್ಲಿ ವಿತರಿಸಿದರು. ತಾಲೂಕು ತಹಶಿಲ್ದಾರ್ ಸತ್ಯಪ್ಪ ಸಚ್ಚಿದಾನಂದ ಕುಚನೂರು, ಪುರಸಭಾ ಸದಸ್ಯೆ ಸೌಮ್ಯ ಶೆಟ್ಟಿ ಈ ಸಂದರ್ಭದಲ್ಲಿದ್ದರು.

ಟೋಲ್‍ಗೇಟ್ ಸ್ಥಗಿತವಾಗುವವರೆಗೆ ವಿರಮಿಸುವುದಿಲ್ಲ: ಮುನೀರ್ ಕಾಟಿಪಳ್ಳ

ಸುರತ್ಕಲ್ ಅಕ್ರಮ ಟೋಲ್‍ಗೇಟ್ ತೆರವಿಗೆ ಆಗ್ರಹಿಸಿ ಹೋರಾಟವನ್ನು ಮತ್ತಷ್ಟು ತೀವೃತೆಯಿಂದ ಮುಂದುವರೆಸುತ್ತೇವೆ. ನಾಳೆಯೇ ಹೋರಾಟ ಸಮಿತಿಯ ಸಭೆ ಸೇರಿ ಮುಂದಿನ ಹೋರಾಟವನ್ನು ನಿರ್ಧರಿಸುತ್ತೇವೆ. ಟೋಲ್ ಸ್ಥಗಿತವಾಗುವವರೆಗೆ ವಿರಮಿಸುವುದಿಲ್ಲ ಎಂದು ಟೋಲ್‍ಗೇಟ್ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಈ ಪ್ರತಿಕ್ರಿಯೆ ನೀಡಿ ಟೋಲ್‍ಗೇಟ್‍ಗೆ ಮುತ್ತಿಗೆ ಹಾಕುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಬಳಿಕ

ಶಿರೂರು : ವಿದ್ಯುತ್ ಅವಘಡ ಉದ್ಯಮಿ, ಸಾಮಾಜಿಕ ಮುಖಂಡ ಸತೀಶ ಪ್ರಭು ಮೃತ್ಯು

ಶಿರೂರು: ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಶಿರೂರಿನಲ್ಲಿ ನಡೆದಿದೆ.ಶಿರೂರಿನ ಬಿಜೆಪಿ ಮುಖಂಡ ಉದ್ಯಮಿ,ಜನಾನುರಾಗಿ,ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸತೀಶ ಸುಬ್ರಾಯ ಪ್ರಭು (52)ಮ್ರತಪಟ್ಟ ವ್ಯಕ್ತಿಯಾಗಿದ್ದಾರೆ. ಸತೀಶ ಸುಬ್ರಾಯ ಪ್ರಭು ಅವರು, ಪ್ರಗತಿಪರ ಕೃಷಿಕರು, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಎಲ್ಲಾ ಸಾಮಾಜಿಕ

ನವರಾತ್ರಿ ಹುಲಿವೇಷ ಸ್ತಬ್ಧಚಿತ್ರದಿಂದ ಬಂದ ಹಣ ಅಶಕ್ತ ಕುಟುಂಬಗಳಿಗೆ ವಿತರಣೆ

ಬಿರುವೆರ್ ಫ್ರೆಂಡ್ಸ್ ಮಂಡಾಡಿ ಮತ್ತು ಮಹಾಮ್ಮಾಯಿ ಫ್ರೆಂಡ್ಸ್ ಮಂಡಾಡಿ ಇವರ ಸಹ ಭಾಗಿತ್ವದಲ್ಲಿ ನವರಾತ್ರಿಯ ಶಾರದಾ ಶೋಭಾಯಾತ್ರೆಗೆ ಹುಲಿವೇಶದ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಾಯಿತು. ಬಂದ ಹಣವನ್ನು ಅಶಕ್ತ ಕುಟುಂಬಗಳಿಗೆ ಧನದ ರೂಪದಲ್ಲಿ, ಮತ್ತು ಮಕ್ಕಳಿಗೆ ಪುಸ್ತಕದ ರೂಪದಲ್ಲಿ ವಿತರಿಸಲಾಯಿತು. ಅರ್ಬಿಗುಡ್ಡೆ ನಿವಾಸಿಗಳಾದ ಲೋಕೇಶ ಮತ್ತು ಶ್ರೀಮತಿ ಭವಾನಿ ಅವರ ಪುತ್ರ ಆಯುಷ್ ಎಂಬ ಬಾಲಕನ ವೈದ್ಯಕೀಯ ಚಿಕಿತ್ಸೆಗಾಗಿ ನೆರವನ್ನು ಸಂಸ್ಥೆಯ ಪದಾಧಿಕಾರಿಗಳ

ಕುಂದಾ ಬಾರಂದಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿ ಸಾನಿಧ್ಯ : ಲೋಕಕಲ್ಯಾಣಾರ್ಥವಾಗಿ ಶತಚಂಡಿಕಾ ಯಾಗ

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರತಾಲೂಕಿನ ಕುಂದಬಾರಂದಾಡಿ ಗ್ರಾಮದ ಮೂಡಾರೆ ಶ್ರೀದುರ್ಗಾಪರಮೇಶ್ವರಿ ದೇವಿ ಕ್ಷೇತ್ರದಲ್ಲಿ ಊರಿನ ಒಳಿತಿಗಾಗಿ ಹಮ್ಮಿಕೊಳ್ಳಲಾದ ವೇ.ಮೂ ರಾಮಕೃಷ್ಣ ಭಟ್ಟ್ ಶಾರ್ಕೆ ನೇತೃತ್ವದಲ್ಲಿ ಶತಚಂಡಿಕಾ ಯಾಗ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂರ್ಣಾಹುತಿ ಆಗುವುದರ ಮುಖೇನ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ದೂರ ದೂರ ಊರಿನಿಂದ ಆಗಮಿಸಿದ ಸಾವಿರಾರು ಭಕ್ತರು ದೇವಿಯ ಅನ್ನ ಪ್ರಸಾದವನ್ನು ಸ್ವೀಕರಿಸಿದರು ಶ್ರೀದೇವಿಯ ಮುಡಿ ಗಂಧ ಪ್ರಸಾದವನ್ನು

ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಬಂಧನ ಖಂಡನೀಯ : ಎಸ್‌ ಡಿಪಿಐ

ಮಂಗಳೂರು: ಅನಧಿಕೃತ ಸುರತ್ಕಲ್ ಟೋಲ್ ಅನ್ನು ತೆರವುಗೊಳಿಸಲು ಆಗ್ರಹಿಸಿ ಟೋಲ್ ವಿರೋಧಿ ಹೋರಾಟ ಸಮಿತಿ ಇಂದು ಸುರತ್ಕಲ್ ಟೋಲ್ ಬಳಿ ಪ್ರತಿಭಟನೆ ನಡೆಸುತ್ತುದ್ದಾಗ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ ಘಟನೆಯನ್ನು ಎಸ್ ಡಿಪಿಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ತೀವ್ರವಾಗಿ ಖಂಡಿಸಿದ್ದಾರೆ. ಈ ದೇಶದ ಸಂವಿಧಾನವು ಅನ್ಯಾಯ, ಅನೀತಿ, ಅಕ್ರಮದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನೀಡಿದೆ ಆದರೆ ಬಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ