ನವರಾತ್ರಿ ಹುಲಿವೇಷ ಸ್ತಬ್ಧಚಿತ್ರದಿಂದ ಬಂದ ಹಣ ಅಶಕ್ತ ಕುಟುಂಬಗಳಿಗೆ ವಿತರಣೆ

ಬಿರುವೆರ್ ಫ್ರೆಂಡ್ಸ್ ಮಂಡಾಡಿ ಮತ್ತು ಮಹಾಮ್ಮಾಯಿ ಫ್ರೆಂಡ್ಸ್ ಮಂಡಾಡಿ ಇವರ ಸಹ ಭಾಗಿತ್ವದಲ್ಲಿ ನವರಾತ್ರಿಯ ಶಾರದಾ ಶೋಭಾಯಾತ್ರೆಗೆ ಹುಲಿವೇಶದ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಾಯಿತು.

ಬಂದ ಹಣವನ್ನು ಅಶಕ್ತ ಕುಟುಂಬಗಳಿಗೆ ಧನದ ರೂಪದಲ್ಲಿ, ಮತ್ತು ಮಕ್ಕಳಿಗೆ ಪುಸ್ತಕದ ರೂಪದಲ್ಲಿ ವಿತರಿಸಲಾಯಿತು. ಅರ್ಬಿಗುಡ್ಡೆ ನಿವಾಸಿಗಳಾದ ಲೋಕೇಶ ಮತ್ತು ಶ್ರೀಮತಿ ಭವಾನಿ ಅವರ ಪುತ್ರ ಆಯುಷ್ ಎಂಬ ಬಾಲಕನ ವೈದ್ಯಕೀಯ ಚಿಕಿತ್ಸೆಗಾಗಿ ನೆರವನ್ನು ಸಂಸ್ಥೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಹಾಗೂ, ಸರಕಾರಿ ಪ್ರೌಢಶಾಲೆ ಕೊಯಿಲ ಬಂಟ್ವಾಳ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಶ್ರೀ ದುರ್ಗಾಂಬಾ ಮಂದಿರ, ಬಿರುವೆರ್ ಫ್ರೆಂಡ್ಸ್ ಮಂಡಾಡಿ,ಮಹಮ್ಮಾಯಿ ಫ್ರೆಂಡ್ಸ್, ಸಹ ಭಾಗಿತ್ವದಲ್ಲಿ ವಿತರಿಸಲಾಯಿತು.

ಮಕ್ಕಳಿಗೆ ಸಿಹಿತಿಂಡಿ ಹಂಚಿ ಮಂದಿರದ ಅರ್ಚಕರಾದ ಪ್ರಶಾಂತ್ ಭಟ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರು, ಸಹೋದ್ಯೋಗಿಗಳು, ಬಿರುವೆರ್ ಫ್ರೆಂಡ್ಸ್ ಮಂಡಾಡಿಯ ಕಾರ್ಯದರ್ಶಿ ಅನಿಲ ಪೂಜಾರಿ ಮಂಡಾಡಿ, ಮಹಾಮ್ಮಾಯಿ ಫ್ರೆಂಡ್ಸ್ ನ ಕಾರ್ಯದರ್ಶಿ ಹರೀಶ್, ಪ್ರಶಾಂತ್, ರತೀಶ್, ಕಿರಣ್ , ಸಂತೋಷ್ ಸಾಕ್ಷಿಯಾದರು.

Related Posts

Leave a Reply

Your email address will not be published.