ಕುಂದಾ ಬಾರಂದಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿ ಸಾನಿಧ್ಯ : ಲೋಕಕಲ್ಯಾಣಾರ್ಥವಾಗಿ ಶತಚಂಡಿಕಾ ಯಾಗ

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರತಾಲೂಕಿನ ಕುಂದಬಾರಂದಾಡಿ ಗ್ರಾಮದ ಮೂಡಾರೆ ಶ್ರೀದುರ್ಗಾಪರಮೇಶ್ವರಿ ದೇವಿ ಕ್ಷೇತ್ರದಲ್ಲಿ ಊರಿನ ಒಳಿತಿಗಾಗಿ ಹಮ್ಮಿಕೊಳ್ಳಲಾದ ವೇ.ಮೂ ರಾಮಕೃಷ್ಣ ಭಟ್ಟ್ ಶಾರ್ಕೆ ನೇತೃತ್ವದಲ್ಲಿ ಶತಚಂಡಿಕಾ ಯಾಗ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂರ್ಣಾಹುತಿ ಆಗುವುದರ ಮುಖೇನ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ದೂರ ದೂರ ಊರಿನಿಂದ ಆಗಮಿಸಿದ ಸಾವಿರಾರು ಭಕ್ತರು ದೇವಿಯ ಅನ್ನ ಪ್ರಸಾದವನ್ನು ಸ್ವೀಕರಿಸಿದರು ಶ್ರೀದೇವಿಯ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿದರು. ಶತಚಂಡಿಕಾ ಯಾಗದ ಸೇವಾ ಕರ್ತರಾದ ಶ್ರೀರಾಮಕೃಷ್ಣ ಶೇರೇಗಾರ ಮತ್ತು ಕುಟುಂಬಸ್ಥರು ಹಾಗೂ ಶ್ರೀಮತಿ ಮತ್ತು ಶ್ರೀ ನಾಗೇಂದ್ರ ಜಿ.ಡಿ, ಶ್ರೀಮತಿ ಮತ್ತು ಶ್ರೀ ರಾಘವೇಂದ್ರ ಜಿ.ಡಿ ತಿಮ್ಮಪ್ಪ ಶೇರೆಗಾರ ಗಂಗೊಳ್ಳಿ ಅವರ ಪುತ್ರರು. ಶ್ರೀ ದುರ್ಗಾಪರಮೇಶ್ವರಿ ಮಕ್ಕಳ ಮೇಳದ ವತಿಯಿಂದ ಅಭಿಮನ್ಯು ಕಾಳಗ ಯಕ್ಷಗಾನ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದೆ ಸತ್ಯ ಧರ್ಮ ನ್ಯಾಯದ ದಾರಿಯಲ್ಲಿ ಸಾಗಿದರೆ ಬದುಕಿಗೆ ಎದುರಾಗುವ ಕಷ್ಟಗಳು ದೇವರ ಅನುಕರಣೆ ಯಿಂದ ದೂರವಾಗುವುದುಶ್ರೀದುರ್ಗಾಪರಮೇಶ್ವರಿ ದೇವಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ, ಕೊಲ್ಲೂರು ದೇವಳದ ಆಡಳಿತ ಧರ್ಮದರ್ಶಿ ಕೆರಾಡಿ ಚಂದ್ರಶೇಖರ ಶೆಟ್ಟಿ,ಕೇಂದ್ರೀಯ ವಿಶ್ವಸ್ಥ ಮಂಡಳಿಯ ಸದಸ್ಯ ವಿಶ್ವ ಹಿಂದೂ ಪರಿಷತ್ ಪ್ರೇಮಾನಂದ ಶೆಟ್ಟಿ ಕಟ್ಕೇರೆ, ಹಕ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಚೇತನ್ ಮೊಗವೀರ, ಕೃಷ್ಣ ಮೂರ್ತಿ ಕರ್ಣಿಕ್ ಕುಂದಬಾರಂದಾಡಿ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೀವ ಶೆಟ್ಟಿ ಮತ್ತು ಸಮಿತಿ ಸದಸ್ಯರು, ಅರ್ಚಕರಾದ ನಾಗೇಶ್ವರ ಉಡುಪ ಮತ್ತು ಅನಂತಪದ್ಮನಾಭ ಉಡುಪ, ಗ್ರಾಮಸ್ಥರು ಉಪಸ್ಥಿತರಿದ್ದರು.