ಬೆಂಗಳೂರು, ಸೆ, 1; ನಾಡಿನ ಶ್ರೋತೃಗಳ ಮನೆಮಾತಾಗಿರುಇವ ಆಕಾಶವಾಣಿ ಎಫ್.ಎಂ. ರೈನ್ ಬೋ – ಕನ್ನಡ ಕಾಮನ ಬಿಲ್ಲು 21 ತುಂಬಿ 22 ನೇ ವರ್ಷಕ್ಕೆ ಕಾಲಿಟ್ಟಿದೆ.ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಆಕಾಶವಾಣಿ ಆವರಣದಲ್ಲಿ ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ಡಾ. ನಿರ್ಮಲ ಸಿ ಎಲಿಗಾರ್, ತಾಂತ್ರಿಕ ವಿಭಾಗದ ಉಪ
ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಪುಣ್ಕೆದಡಿಯಲ್ಲಿ ಮಂಗಳವಾರ ತಡರಾತ್ರಿ ಮನೆಯೊಂದಕ್ಕೆ ಅತ್ಯಂತ ಭೀಕರ ರೀತಿಯಲ್ಲಿ ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಮನೆಯ ಸೊತ್ತುಗಳ ಜತೆಗೆ ಕ್ಯಾಟರಿಂಗ್ ಉದ್ಯಮ ಪಾತ್ರೆ ಪಗಡೆಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡೆದಿದೆ.ಪುಣ್ಕೆದಡಿ ನಿವಾಸಿ ಲೋಕೇಶ್ ಪೂಜಾರಿ ಅವರ ಮನೆಗೆ ಸಿಡಿಲು ಬಡಿದಿದ್ದು, ಆದರೆ ಮನೆಮಂದಿ ಪಕ್ಕದ ಮನೆಯಲ್ಲಿ ಮಲಗಿದ್ದ ಹಿನ್ನೆಲೆಯಲ್ಲಿ ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಇಲ್ಲದೇ ಇದ್ದರೆ ಜೀವಕ್ಕೂ
ಮಂಜೇಶ್ವರ: ತಲಪಾಡಿ-ಚೆಂಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿರುವ ಮಧ್ಯ ತಲಪ್ಪಾಡಿಯಿಂದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿರ್ಮಿಸಿರುವ ರಿಟರ್ನ್ ಹಾಲ್ ಬಿರುಕು ಬಿಟ್ಟಿರುವುರಾಗಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಯಾವುದೇ ಮಾಹಿತಿ ನೀಡದೆ ಕಾಮಗಾರಿ ಮುಂದುವರಿಸುತ್ತಿರುವ ಗುತ್ತಿಗೆದಾರರು ಬಿರುಕು ಬಿಟ್ಟಿರುವ ಬಗ್ಗೆ ಸ್ಥಳೀಯರ ಪ್ರಶ್ನೆಗಳಿಗೆ ಸ್ಪಂದಿಸದಿರುವುದು ಜನರ ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಹೆದ್ದಾರಿ
ವಸಾಯಿಯ ಪಶ್ಚಿಮದ ಗೊರೈಪಾಡದ ಜೀವನ್ ನಗರ ನಿವಾಸಿ 35 ವರ್ಷ ಸುಧೀರ್ ಕುಮಾರ್ ಸಫಲ್ಯ ಅವರು ಆ.14ರಂದು ನಾಪತ್ತೆಯಾಗಿದ್ದು ಬಳಿಕ ಸೋಮವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ಮೂಲತಃ ಮಂಜೇಶ್ವರ ಬಳಿಯ ಉಪ್ಪಳ ನಿವಾಸಿಯಾಗಿದ್ದ ಸುಧೀರ್ ಅವಿವಾಹಿತನಾಗಿದ್ದು, ಇವರನ್ನು ಕೊಲೆ ಮಾಡಲಾದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗೊರೈಪಾಡದ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸುಧೀರ್ ಆ.14ರಂದು ಉಪ್ಪಳ ಸಮಿತಿಯ ಕಾರ್ಯದರ್ಶಿಯವರಿಗೆ ಫೋನ್ ಕರೆ ಮಾಡಿ ಭೇಟಿಗಾಗಿ
ಸೆ 2ರ ಮೋದಿ ಸಮಾವೇಶಕ್ಕಾಗಿ ಕೂಳೂರು ವ್ಯಾಪ್ತಿಯಲ್ಲಿ ಭಯದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಎರಡು ದಿನದ ಬಂದ್ ಗೆ ಆಡಳಿತವೇ ಕರೆನೀಡಿದೆ. ಗೋಲ್ಡ್ ಪಿಂಚ್ ಮೈದಾನದ ಸುತ್ತಮುತ್ತಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳಿಗೆ ಗಣೇಶೋತ್ಸವದ ನೆಪದಲ್ಲಿ ರಜೆ ಸಾರಲಾಗಿದೆ.. ಮೊದಲೇ ಕೊರೋನಾ, ನೆರೆ, ಬೆಲೆಏರಿಕೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕಾರ್ಯಕ್ರಮವು ಒಂದು ಪಕ್ಷದ
ಅವರು ಇಂದು ನಗರದಲ್ಲಿರೋ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡುತ್ತಾ, ಈ ಕಾರ್ಯಕ್ರಮದಲ್ಲಿ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಹಿತ ಸುಮಾರು ಒಂದುವರೆ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಕೆಲವು ಫಲಾನಭವಿಗಳಿಗೆ ಯೋಜನೆಗಳ ಹಸ್ತಾಂತರ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಕಾರ್ಯಕ್ರಮ ನಡೆಯಲಿರುವುದರಿಂದ ಸಾರ್ವಜನಿಕರು ಮುಂಚಿತವಾಗಿ ಭಾಗವಹಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ನಡೆಸಲಾಗುತ್ತಿದೆ
ಉಡುಪಿ: ನಗರದ ಕಿನ್ನಿಮೂಲ್ಕಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೀನು ಮಾರಾಟ ಶೆಡ್ ನ್ನು ನೆಲಸಮಗೊಳಿಸಿದ ಪ್ರಕರಣ ಇವತ್ತು ನಗರಸಭೆಯಲ್ಲಿ ಪ್ರತಿಧ್ವನಿಸಿತು.ಕೆಲಹೊತ್ತು ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಜಟಾಪಟಿಗೂ ಕಾರಣವಾಯಿತು.ಕೊನೆಗೆ ಮೀನು ಮಾರಾಟ ಶೆಡ್ ನ್ನು ಅನಧಿಕೃತವಾಗಿ ಮೀನುಗಾರ ಮಹಿಳೆಯರಿಗೆ ಕಟ್ಟಿಸಿ ಕೊಟ್ಟ ಕಾಂಗ್ರೆಸ್ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮತ್ತು ರಮೇಶ್ ಕಾಂಚನ್ ಸಭೆಯಲ್ಲೇ ವಿಷಾದ ವ್ಯಕ್ತಪಡಿಸಿದರು. ಐದು ದಿನಗಳ
ಮೂಡುಬಿದಿರೆ :ಪುರಸಭಾ ವ್ಯಾಪ್ತಿಯಲ್ಲಿ ಕಸದ ರಾಶಿ ಬೀಳುವುದನ್ನು ತಪ್ಪಿಸಲು ಹಾಗೂ ಯಾರು ಕಸವನ್ನು ತಂದು ಸುರಿಯುತ್ತಾರೆ ಎಂಬುದನ್ನು ಪತ್ತೆ ಹಚ್ಚಲು ಪುರಸಭೆಯ ವತಿಯಿಂದ ವಿವಿಧ ಕಡೆಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಆದರೆ ಸಿಸಿ ಕೆಮರಾದ ಬುಡದಲ್ಲಿಯೇ ಕಸದ ರಾಶಿ ತುಂಬುತ್ತಿದೆ. ಇದಕ್ಕೆ ಏನು ಕ್ರಮ ಕೈಗೊಳ್ಳುತ್ತೀರಿ ಈವರೆಗೆ ಯಾವ ಕ್ರಮವನ್ನು ಕೈಗೊಂಡಿದ್ದೀರಿ ಸಿಸಿ ಕೆಮರಾದ ಬಆಯೇ ಕಸದ ರಾಶಿ ಬೀಳುವುದಾದರೆ ಸಿಸಿ ಕೆಮರಾದ ಅಗತ್ಯವಿದೆಯೇ. ಪರಿಸರ
ಸೌಹಾರ್ದ ಲಹರಿಯ ನೂತನ ಪದಾಧಿಕಾರಿಗಳ ಉದ್ಘಾಟನ ಸಮಾರಂಭವು ಮಾರ್ಕೊ ಪೋಲೊ ಹೋಟೆಲ್ ದುಬೈ ತಾರೀಕು 20-08-2022 ರಂದು ವಿಜೃಂಭಣೆಯಿಂದ ನಡೆಯಿತು. ಸಂಘದ ಗೌರವ ಅಧ್ಯಕ್ಷರು ಶ್ರೀ ದಿನೇಶ್ ಸಿ ದೇವಾಡಿಗ ನೂತನ ಪದಾಧಿಕಾರಿಗಳಿಗೆ ಶುಭಾಶಯ ನೀಡಿದರು.ಸಂಘದ ಗೌರವ ಸಲಹೆಗಾರ ಶ್ರೀ ದಯಾ ಕಿರೋಡಿಯನ್ ಸಂಘದ ನಿರ್ಮಾಣ ಮತ್ತೆ ಸಂಘದ ಪೌಂಡರ್ ಸದಾಶಿವ ದಾಸ್ ಅವರ ಬಗ್ಗೆ ಮಾತಾಡಿ ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು. ಸಂಘದ ನಿಕಟ ಪೂರ್ವ ಅಧ್ಯಕ್ಷರು ಶ್ರೀ ಅಶೋಕ್
ಮೂಡುಬಿದರೆಯ: ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ರಾಮಚಂದ್ರ ಭಟ್ ಮೂಡುಬಿದರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.ಮೂಡುಬಿದರೆಯ ಹನುಮಂತನಗರ ನಿವಾಸಿಯಾಗಿದ್ದಾರೆ,. 28ವರ್ಷಗಳ ಸುದೀರ್ಘ ಅವಧಿಯಲ್ಲಿ ಸೇನೆಯಲ್ಲಿ ಸೇವೆ, ಸಲ್ಲಿಸಿದ್ದರು, ಪಂಜಾಬ್, ಹರಿಯಾಣ, ಕೋಲ್ಕತ್ತಾ, ಬರೇಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶಪ್ರೇಮ ಮೆರೆದಿದ್ದಾರೆ, ಪತ್ನಿ ದೇವಕಿ ಭಟ್ ಮೂಡುಬಿದರೆ ರೋಟರಿ ಆಂಗ್ಲ ಮಾಧ್ಯಮ
























