ವಿಜೃಂಭಣೆಯಿಂದ ನಡೆದ ಇತಿಹಾಸ ಪ್ರಸಿದ್ಧ ತಗ್ಗರ್ಸೆ ಕಂಬಳ ಮಹೋತ್ಸವ

ಇತಿಹಾಸ ಪ್ರಸಿದ್ಧ ತಗ್ಗರ್ಸೆ ಸಾಂಪ್ರದಾಯಕ ಹೆಗ್ಡೆಯವರ ಮನೆ ಅನುವಂಶಿಯವಾಗಿ ನಡೆದು ಬಂದ ಕಂಬಳ ಮಹೋತ್ಸವ ವಿಜೃಂಭಣೆ ನಡೆಯಿತು.ಈ ಬಾರಿ ಸೆನ್ಸಾರ್ ಮೂಲಕ ಕೋಣದ ಓಟದ ವೇಗಮಿತಿಯನ್ನು ಅಳೆಯುವ ಸಾಧನ ಅಳವಡಿಸಲಾಗಿರುತ್ತದೆ. ಪ್ರತಿಯೊಂದು ಕೋಣದ ಮಾಲೀಕರು ತಮ್ಮ ಕೋಣವನ್ನು ಸಿಂಗರಿಸಿ ಕೋಣಗಳ ತಲೆಗೆ ಸಿಂಗಾರು ಕೊನೆಯನ್ನು ಕಟ್ಟಿ ವಾದ್ಯದ ಮೂಲಕ ದೇವರ ಹೆಸರನ್ನು ಹೊಳಲು ಕೂಗುತ್ತಾ ಕಂಬಳ ಗದ್ದೆಗೆ ಇಳಿಸಿ ನಂತರ ಕಂಬಳ ಗದ್ದೆಯ ನೀರನ್ನು ಕೋಣಗಳಿಗೆ ಸಿಂಪಡಿಸಿ ಸ್ವಲ್ಪ ನೀರನ್ನು ಕೋಣಗಳಿಗೆ ಕುಡಿಸಿ ತಮ್ಮ ಕೋಣವನ್ನು ಓಡಿಸುತ್ತಿದ್ದರು.

ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ,ತೆಂಗಿನಕಾಯಿ,ಕಬ್ಬು ಹಾಗೆ ಕೋಣಗಳ ಮಾಲೀಕರಿಗೆ ಹೆಗಲಿಗೆ ಶಾಲು ಓದಿಸಿ ಗೌರವದಿಂದ ಬರಮಾಡಿಕೊಳ್ಳಲಾಗುತ್ತದೆ ವಿಶಾಲವಾದ ಈ ಕಂಬಳ ಗದ್ದೆಯನ್ನು ತೋರಣಗಳಿಂದ. ಅಲಂಕಾರಿಸಲಾಗುತ್ತದೆ. ತಗ್ಗರ್ಸೆ ಹೆಗ್ಡೆಯವರ ಮನೆಯವರ ಕೋಣವನ್ನು ಸಿಂಗರಿಸಿಕೊಂಡು ದೈವ ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು. ನಂತರ … ಹುಟ್ಟಿನ ಮನೆ ಕೋಣವನ್ನು ಮೆರವಣಿಗೆ ಮೂಲಕ ಕಂಬಳ ಗದ್ದೆಗೆ ತರುವುದರ ಮುಖೇನ ಕಂಬಳಕ್ಕೆ ಹಸಿರು ನಿಶಾನೆ ಸಿಕ್ಕಂತಾಗುತ್ತದೆ… ತೆಗ್ಗರ್ಸೆ ಹೆಗಡೆಯವರ ಮನೆಯ 4ಜೊತೆ ಕೋಣಗಳು ಕಂಬಳ ಗೆದ್ದೆಯಲ್ಲಿ ಓಡಿಸುದರ್ ಮೂಲಕ ಕಂಬಳ ಮುಕ್ತಯಗೊಳಿಸಲಾಗುತದೆ.

ವಿಶೇಷ ಆಕರ್ಷಣೆಯಾಗಿ ಬಿಂದುವಾಗಿ ಕಾಂತಾರ ಚಿತ್ರದಲ್ಲಿ ಹಾಡಿದ ನಾಗಣ್ಣ ನೋಡಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದರು.ಹಲವಾರು ವರ್ಷಗಳಿಂದ ಕಂಬಳದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತುಒಟ್ಟು 60 ಜೊತೆ ಕೋಣಗಳು ಭಾಗವಹಿಸಿದ್ದು ಈ ಪೈಕಿ ವಿಜೇತವಾಗಿರುವ ಕೋಣಗಳಿಗೆ ಮೂಕಾಂಬಿಕಾ ಗೇರುಬೀಜ ಕಾರ್ಖಾನೆ ತೆಗ್ಗರ್ಸೆ ಇವರು ನಗದು ಮತ್ತು ಶಾಶ್ವತ ಫಲಕ ಪ್ರಾಯೋಜಕರಾಗಿದ್ದರು

ಈ ಸಂದರ್ಭದಲ್ಲಿ ಟಿ. ನಾರಾಯಣ್ ಹೆಗ್ಡೆ, ಕಂಠದಮನೆ ಹಾಗೂ ತಗ್ಗರ್ಸೆ ಹೆಗ್ಡೆ ಕುಟುಂಬದವರು ಹಲವರು ಕಂಬಳ ಅಭಿಮಾನಿಗಳು ತಗ್ಗರ್ಸೆ ಗ್ರಾಮಸ್ಥರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.