ತಾಂಟ್ರೆ ಬಾ ತಾಂಟ್ರೆ ಖ್ಯಾತಿಯ ರಿಯಾಝ್ ಫರಂಗಿಪೇಟೆಗೆ ಉಳ್ಳಾಲದಲ್ಲಿ ಅದ್ಧೂರಿ ಸ್ವಾಗತ

ಉಳ್ಳಾಲ: ಎಸ್‍ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರಿಯಾಝ್ ಫರಂಗಿಪೇಟೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಉಳ್ಳಾಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡರು. ಉಳ್ಳಾಲ ನಗರಸಭೆ ಎದುರುಗಡೆಯಿರುವ ಪಕ್ಷದ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಿಯಾಝ್ ಫರಂಗಿಪೇಟೆ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವಕಾಶ ಕಲ್ಪಿಸಿದ ಪಕ್ಷದ ಎಲ್ಲಾ ನಾಯಕರು, ತಳಮಟ್ಟದಲ್ಲಿ ಹೆಸರು ಸೂಚಿಸಿದ ಕಾರ್ಯಕರ್ತರುಗಳಿಗೆ ಕೃತಜ್ಞತೆಗಳು.
ಅರ್ಜಿ ಹಾಕದೇ, ಅಪೇಕ್ಷೆಯೂ ಪಡದ, ನಾಯಕರ ಕೈಕಾಲು ಹಿಡಿಯುವ ಕೆಲಸವನ್ನೂ ಮಾಡದೇ ದೊರೆತ ಅವಕಾಶವಿದೆ. ಪಕ್ಷದೊಳಗೆ ಹಲವು ಹೆಸರುಗಳ ಚರ್ಚೆ ನಡೆದು, ಸುದೀರ್ಘ ಚರ್ಚೆಯ ನಂತರ ಪಕ್ಷದ ನಾಯಕರು ತೀರ್ಮಾನಿಸಿದಂತಹ ಹಿನ್ನೆಲೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಹಾಗೂ ಚುನಾವಣಾ ಉಸ್ತುವಾರಿ ಅತಾವುಲ್ಲ ಜೋಕಟ್ಟೆ, ನವಾಝ್ ಉಳ್ಳಾಲ್, ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ಅಬ್ಬಾಸ್ ಎ.ಆರ್ ಉಪಸ್ಥಿತರಿದ್ದರು.