ಮಿಜೋರಾಂನ ಲೆಂಗ್‍ಪುಯಿಯಲ್ಲಿ ಬಿದ್ದ ವಿಮಾನ
ಮ್ಯಾನ್ಮಾರ್ ಮಿಲಿಟರಿ ವಿಮಾನವೊಂದು ಭಾರತದ ಮಿಜೋರಾಂನ ಲೆಂಗ್‍ಪುಯಿಯಲ್ಲಿ ನೆಲಕ್ಕೆ ವೇಗವಾಗಿ ಒರೆಸಿದ್ದು ಅದರಲ್ಲಿದ್ದ ಗಾಯಗೊಂಡ 14 ಜನರನ್ನು ಲೆಂಗ್‍ಪುಯಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಡಿಜಿಪಿ ಹೇಳಿದ್ದಾರೆ.
ಮಂಗಳವಾರ ಮ್ಯಾನ್ಮಾರ್ ವಿಮಾನವು ಲೆಂಗ್‍ಪುಯಿ ವಿಮಾನ ನಿಲ್ದಾಣಕ್ಕೆ ಬಡಿದು ಕೆಳಗಿಳಿದಿದೆ. ಪೈಲಟ್ ಸಹಿತ ಅದರಲ್ಲಿದ್ದ 14 ಮಂದಿ ಗಾಯಗೊಂಡಿದ್ದಾರೆ. ಕೂಡಲೆ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಇತ್ತೀಚೆಗೆ ಉಗ್ರರೊಡನೆ ತಾಕಲಾಟದಲ್ಲಿ ಕೆಲವು ಮ್ಯಾನ್ಮಾರ್ ಸೈನಿಕರು ಭಾರತದ ಮಿಜೋರಾಂ ಒಳಗೆ ಬಂದಿದ್ದರು. ಅವರನ್ನು ಕರೆದೊಯ್ಯಲು ಬಂದಿದ್ದ ವಿಮಾನವು ತಾನೇ ಅಪಘಾತದಲ್ಲಿ ಮುರಿದಿದೆ.
ಈ ನಡುವೆ ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್‍ನವರು 184 ಗಡಿ ದಾಟಿ ಬಂದ ಸೈನಿಕರನ್ನು ಅವರ ದೇಶಕ್ಕೆ ಕಳುಹಿಸಿಕೊಟ್ಟಿರುವುದಾಗಿ ಹೇಳಿದೆ. ಇನ್ನೂ 92 ಸೈನಿಕರನ್ನು ಒಯ್ಯಲು ಮ್ಯಾನ್ಮಾರ್ ವಿಮಾನ ಬಂದಿತ್ತು.