ತೊಕ್ಕೊಟ್ಟು: ಕೊಚ್ಚಿನ್ ಬೇಕರಿಯ ಮಳಿಗೆ ಶುಭಾರಂಭ
ತನ್ನದೇ ಆದ ರುಚಿ, ಗುಣಮಟ್ಟಕ್ಕೆ ಪ್ರಸಿದ್ಧಿಯನ್ನು ಪಡೆದ ಕೇಕ್ ಮತ್ತು ಸ್ವೀಟ್‍ನ ಕೊಚ್ಚಿನ್ ಬೇಕರಿಯ ಮತ್ತೊಂದು ಮಳಿಗೆ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಶುಭಾರಂಭಗೊಂಡಿತು. ಉತ್ತಮ ಆಹಾರಕ್ಕಿಂತ ಹೆಚ್ಚಿನ ಸಂತೋಷವನ್ನು ಬೇರೆ ಯಾವುದೂ ಜನರಿಗೆ ತರುವುದಿಲ್ಲ.ಕೇಕ್‍ಗಳು, ಸಿಹಿತಿಂಡಿಗಳು ಮತ್ತು ಬೇಕರಿ ವಸ್ತುಗಳ ಎಲ್ಲಾ ಆಹಾರ ಉತ್ಪನ್ನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ಅತ್ಯುತ್ತಮ ಬೇಕರಿ ಉತ್ಪನ್ನಗಳ ತಯಾರಕರಾಗಿ ಒಂದು ಬ್ರ್ಯಾಂಡ್ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಕೊಚ್ಚಿನ ಬೇಕರಿ, ರುಚಿ, ಗುಣಮಟ್ಟ ಮತ್ತು ವೈವಿಧ್ಯತೆಯಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ಇದೀಗ ಕೊಚ್ಚಿನ್ ಬೇಕರಿಯ ಮತ್ತೊಂದು ಶಾಖೆ ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಕಾರ್ಯಾರಂಭಗೊಂಡಿತು. ನೂತನ ಮಳಿಗೆಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಯ ಬಾನು ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಂತರ ಗಣ್ಯರು ದೀಪ ಬೆಳಗಿಸಿ ಲೋಕಾರ್ಪಣೆಗೊಳಿಸಿದರು.
ಕೊಚ್ಚಿನ್ ಬೇಕರಿಯ ಮಾಲಕರಾದ ಎಂ.ಪಿ. ರಮೇಶ್ ಅವರು ಮಾತನಾಡಿ, ಕೊಚ್ಚಿನ್ ಬೇಕರಿ ಮಳಿಗೆಯನ್ನು ಮೊದಲ ಬಾರಿಗೆ ಕ್ಯಾಲಿಕಟ್‍ನಲ್ಲಿ ಪ್ರಾರಂಭಿಸಲಾಗಿದ್ದು, ಕೇರಳದ ವಿವಿಧ ಕಡೆ ಹಾಗೂ ಮಂಗಳೂರಿನಲ್ಲೂ ಮಳಿಗೆ ಕಾರ್ಯಾರಂಭಗೊಂಡಿದೆ. ಈಗಾಗಲೇ ಮಂಗಳೂರಿನಲ್ಲಿ ಆರು ಮಳಿಗೆಗಳನ್ನು ಹೊಂದಿದೆ.
ಇದೀಗ ತೊಕ್ಕೊಟ್ಟುವಿನ ಕಲ್ಲಾಪುವಿನಲ್ಲಿ ಕೊಚ್ಚಿನ್ ಬೇಕರಿಯ ಮತ್ತೊಂದು ಮಳಿಗೆಯನ್ನು ಆರಂಭಿಸಿದ್ದೇವೆ. ಕೊಚ್ಚಿನ ಬೇಕರಿಗೆ ಇಂಡಿಯಾನ್ ಬುಕ್ ಆಫ್ ರೆಕಾರ್ಡ್, ಏಷ್ಯಾನ್ ಬುಕ್ ಆಫ್ ರೆಕಾರ್ಡ್, ಕೇರಳ ಬುಕ್ ಅಫ್ ರೆಕಾರ್ಡ್, ಯುನೈಟೆಡ್ ಬುಕ್ ಆಫ್ ರೆಕಾರ್ಡ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗಳು ಬಂದಿದೆ ಎಂದರು.
ಇದೇ ವೇಳೆ ಮಾತನಾಡಿದ ಕೊಚ್ಚಿನ್ ಬೇಕರಿಯ ಲವೀನ ರಮೇಶ್ ಅವರು ಕೊಚ್ಚಿನ್ ಬೇಕರಿಯ ತಿಂಡಿಗಳು ಪ್ರಸಿದ್ಧಿಯನ್ನು ಪಡೆದಿದ್ದು, ಕೇರಳದ ತಿಂಡಿಗಳನ್ನು ಮಂಗಳೂರಿನಲ್ಲೂ ಪರಿಚಯಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದರು.
ಇದೇ ವೇಳೆ ಮೊದಲ ಗ್ರಾಹಕರಾಗಿ ಎಂ. ಮೂಸ ಮೊಯ್ದಿನ್ ಅವರು ಸಿಹಿ ತಿಂಡಿಗಳನ್ನು ಖರೀದಿಸಿದರು. ಈ ಸಂದರ್ಭದಲ್ಲಿ ಕೊಚ್ಚಿನ್ ಬೇಕರಿಯ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕೊಚ್ಚಿನ ಬೇಕರಿಯ ಎಲ್ಲಾ ಉತ್ಪನ್ನಗಳು ವಿಶೇಷ ಪಾಕ ವಿಧಾನಗಳಿಂದ ತಯಾರಿಸಲಾಗುತ್ತದೆ. ವಿಶೇಷ ಆಕರ್ಷಣೆಗಳಲ್ಲಿ ಹನಿ ಕೇಕ್, ಕಾಫಿ ವಾಲ್‍ನಟ್ ಕೇಕ್ ಸೇರಿದಂತೆ ವಿವಿಧ ರುಚಿಕರ ಕೇಕ್‍ಗಳು ಇಲ್ಲಿ ಸಿಗಲಿದೆ. ಇದರ ಜೊತೆಗೆ ಸ್ವೀಟ್ಸ್, ಮಸಲಾ ಬಿಸ್ಕೆಟ್ಸ್‍ಗಳು ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳು ಇಲ್ಲಿ ಲಭ್ಯವಿದೆ.