ಮಳೆಯ ಅಬ್ಬರಕ್ಕೆ ನಿಜಾಮುದ್ದೀನ್- ತಿರುವನಂತಪುರ ಎಕ್ಸ್ ಪ್ರೆಸ್ ಉಡುಪಿಯಲ್ಲಿ ಸ್ಥಗಿತ

ಉಡುಪಿ: ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನೆನ್ನೆ ತಡರಾತ್ರಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಮಟಪಾಡಿ ಗ್ರಾಮದಲ್ಲಿ ರೈಲ್ವೆ ಟ್ರ್ಯಾಕ್ ನ ವಿದ್ಯುತ್ ಕಂಬದ ಮೇಲೆ ಮರ ಕುಸಿದು ಬಿದ್ದಿತ್ತು. ದೆಹಲಿ – ಕೇರಳ ನಡುವೆ ಓಡುವ ನಿಜಾಮುದ್ದೀನ್- ತಿರುವನಂತಪುರ ಎಕ್ಸ್ ಪ್ರೆಸ್ ರೈಲು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಪರಿಣಾಮ, ಉಡುಪಿ ಜಿಲ್ಲೆಯ ರೈಲ್ವೆ ಟ್ರ್ಯಾಕ್ ನಲ್ಲಿ ಓಡುವ ಎಲ್ಲಾ ರೈಲುಗಳ ಸಂಚಾರ ಎರಡು ಗಂಟೆ ಸ್ಥಗಿತಗೊಂಡವು. ರೈಲ್ವೆ ಇಲಾಖೆಯ ಸತತ ಕಾರ್ಯಚರಣೆಯಿಂದ ಮರ ತೆರವು, ವಿದ್ಯುತ್ ಸಂಪರ್ಕಿಸುವ ಕಾರ್ಯ ಪೂರ್ಣಗೊಂಡ ಬಳಿಕ ರೈಲು ಸಂಚಾರ ಎರಡು ಗಂಟೆಗಳ ನಂತರ ಪುನಃ ಆರಂಭಗೊಂಡಿತು. ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
