ಅವಕಾಶಗಳ ಆಕಾಶವೇ ನಮ್ಮ ಮುಂದಿದೆ : ನಟ ಪ್ರಕಾಶ್ ತೂಮಿನಾಡು
ವಿದ್ಯೆಯೂ ಕಲೆಯೂ ಜೊತೆ ಜೊತೆಯಾಗಿ ಸಾಗಲಿ. ಇಂದು ಅವಕಾಶಗಳ ಆಕಾಶವೇ ನಮ್ಮ ಮುಂದಿದೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು’ಎಂಬುದಾಗಿ ರಂಗಭೂಮಿ ಕಲಾವಿದ,ಚಲನಚಿತ್ರ ನಟ ಶ್ರೀ ಪ್ರಕಾಶ್ ತೂಮಿನಾಡು ನುಡಿದರು.ಅವರು ಮಂಜೇಶ್ವರ ಉಪಜಿಲ್ಲಾಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ 2022-23ನೇ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳನ್ನು ಜಿ.ವಿ.ಎಚ್.ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ಶ್ರೀಯುತರು ‘ತಾನು ಮೊದಲು ವೇದಿಕೆ ಹತ್ತಿದ್ದು ಇದೇ ಶಾಲೆಯಲ್ಲಿ’ ಎಂದು ಹೆಮ್ಮೆಯಿಂದ ನೆನಪಿಸಿಕೊಂಡರು.
ದೀಪ ಬೆಳಗಿ ಡೋಲು ಬಡಿದು ವಿಶಿಷ್ಟ ರೀತಿಯಲ್ಲಿ ಉದ್ಘಾಟನೆಯನ್ನು ನೆರವೇರಿಸಲಾಯಿತು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಯೋಗಿಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಪ್ರಕಾಶ್ ತೂಮಿನಾಡು ಇವರನ್ನು ಶಾಲೆಯ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ದಿನೇಶ್ .ವಿ.ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ. ಜಿ,ಸಮಗ್ರ ಶಿಕ್ಷಾ ಕೇರಳ ಮಂಜೇಶ್ವರದ ಃPಅ ಶ್ರೀ ವಿಜಯಕುಮಾರ್ ಪಾವಳ,ಕುಂಜತ್ತೂರು ಶಾಲೆಯ ವಿ.ಎಚ್.ಎಸ್.ಸಿ. ವಿಭಾಗದ ಪ್ರಾಚಾರ್ಯರಾದ ಶ್ರೀ ಶಿಶುಪಾಲನ್,ಹಿರಿಯ ಶಿಕ್ಷಕಿ ಶ್ರೀಮತಿ ಸುಚೇತ,ಸ್ಟಾಫ್ ಸೆಕ್ರಟರಿ ಶ್ರೀಮತಿ ಅಮಿತಾ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.ಶಾಲಾವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರಂಗದ ಸಂಯೋಜಕ ಶಿಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.