ಉಡುಪಿ : ಡಿವೈನ್ ಸ್ಟಾರ್ ರಿಶಬ್ ಶೆಟ್ಟಿಗೆ ಕರಾವಳಿಯ ಪಾಣರ ಯಾನೆ ದೈವ ನಲಿಕೆ ಸಂಘಟನೆಯಿಂದ ಸೆ.3ರಂದು ಉಡುಪಿಯಲ್ಲಿ ಸನ್ಮಾನ
ಕಾಂತರ ಸಿನಿಮಾ ಮೂಲಕ ಕರಾವಳಿ ದೈವಾರಾಧನೆಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿ ಡಿವೈನ್ ಸ್ಟಾರ್ ಪಟ್ಟ ಪಡೆದುಕೊಂಡ ರಿಶಬ್ ಶೆಟ್ಟಿ ಅವರಿಗೆ ಕರಾವಳಿಯ ಪಾಣರ ಯಾನೆ ದೈವ ನಲಿಕೆ ಸಂಘಟನೆ ವತಿಯಿಂದ ಸೆ.3ರಂದು ಭಾನುವಾರ ಉಡುಪಿಯಲ್ಲಿ ಸನ್ಮಾನ ನಡೆಯಲಿದೆ.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪಾಣರ ಯಾನೆ ನಲಿಕೆ ಸಮಾಜ ಸೇವಾ ಸಂಘದ ವಾರ್ಷಿಕ ಸಮಾವೇಶ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಚಿತ್ರ ನಟ ರಿಶಬ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತಿದೆ. ಕಾರ್ಯಕ್ರಮವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.