ಕಡಬದ ಹಳೆನೇರಂಕಿ ಗ್ರಾಮದ ಶ್ರೀಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಜಾತ್ರೋತ್ಸವ

ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ನೇಮೋತ್ಸವ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವ ಪ್ರಯುಕ್ತ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಬೆಳಿಗ್ಗೆ ಹಳೆನೇರಂಕಿ ಪೇಟೆಯಿಂದ ಚೆಂಡೆ, ವಾದ್ಯದೊಂದಿಗೆ ಹೊರೆಕಾಣಿಕೆ ಮೆರವಣಿಗೆಯು ದೈವಸ್ಥಾನದ ಸನ್ನಿಧಿಗೆ ಆಗಮಿಸಿತು. ಗ್ರಾಮಸ್ಥರು ಅಡಿಕೆ, ತೆಂಗು, ಸಿಯಾಳ, ಹಿಂಗಾರ, ಬಾಳೆಗೊನೆ ಸೇರಿದಂತೆ ವಿವಿಧ ತರಕಾರಿ ಫಲವಸ್ತುಗಳನ್ನು ಹೊರೆಕಾಣಿಕೆಯಾಗಿ ತಂದು ದೈವದ ಸನ್ನಿಧಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಆಗಿರುವ ಪುತ್ತೂರು ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ, ಸಮಿತಿ ಅಧ್ಯಕ್ಷ ನಾರಾಯಣ ಭಟ್ ಟಿ. ರಾಮಕುಂಜ, ಉಪಾಧ್ಯಕ್ಷ ಪ್ರಸನ್ನ ನಿಸರ್ಗ, ಕಾರ್ಯದರ್ಶಿ ಕಿರಣ್ ಪಾದೆ, ಜೊತೆ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಕಾಯಾರ, ಸದಸ್ಯರಾದ ಶೇಖರ್ ಕಟ್ಟಪುಣಿ, ಡಾ. ಜಿನಚಂದ್ರ ಕಾರ್ಕಳ, ಬಿ. ಸಂಜೀವ ಪೂಜಾರಿ ಬಟ್ಲಡ್ಕ, ಮಹಾಬಲ ರೈ ರಾಮಜಾಲು ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು. ವೈದಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ದೈವಸ್ಥಾನದಲ್ಲಿ ಸ್ವಸ್ತಿ, ಪುಣ್ಯಾಹವಾಚನ, ಗಣಪತಿ ಹೋಮ, ದುರ್ಗಾಹೋಮ, ಪಂಚವಿಂಶತಿ ಕಲಶ, ತಂಬಿಲ ನಡೆದು ಪ್ರಸಾದ ವಿತರಣೆ ಮಾಡಲಾಯಿತು.

Related Posts

Leave a Reply

Your email address will not be published.