ಛಾಯಾಗ್ರಾಹಕರಲ್ಲಿ ಉತ್ತಮ ಕಲಾವಿದ ಅಡಕವಾಗಿದ್ದಾನೆ : ಪತ್ರಕರ್ತ ರಾಮಚಂದ್ರ ಆಚಾರ್ಯ

ಛಾಯಾಚಿತ್ರಗಾರರಿಗೆ ಕಪ್ಪು ಬಿಳುಪು ಯುಗದಲ್ಲಿದ್ದ ಕಷ್ಟ ಕಾರ್ಪಣ್ಯಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಲ್ಲ. ದಾಖಲೆಗಳನ್ನು ಚಿರಾಯ್ಯುವಾಗಿಸುವಲ್ಲಿ ಛಾಯಾಚಿತ್ರಗಾರರ ಪಾತ್ರ ಪ್ರಮುಖವಾಗಿದೆ ಛಾಯಾಚಿತ್ರಗಾರರಲ್ಲಿ ಉತ್ತಮ ಕಲಾವಿಧ ಅಡಕವಾಗಿದ್ದಾನೆ ಎಂಬುದುದಾಗಿ ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯ ಹೇಳಿದ್ದಾರೆ. ಪಡುಬಿದ್ರಿಯ ಎಸ್ ಎಸ್ ಖಾಸಗಿ ಸಭಾಂಗಣದಲ್ಲಿ ವಿಶ್ವ ಛಾಯಾಚಿತ್ರಗಾರರ ದಿನಾಚರಣೆಯ ಅಂಗವಾಗಿ ಹಿರಿಯ ಛಾಯಾಚಿತ್ರಗಾರರಾದ ಬೆಳ್ಮಣ್ ವೆಂಕಟರಾಯ ಕಾಮತ್ ದಂಪತಿ ಹಾಗೂ ಪಡುಬಿದ್ರಿ ಕರುಣಾಕರ್ ನಾಯಕ್ ದಂಪತಿಗಳನ್ನು ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ವಲಯ ಪೋಟೋಗ್ರಾಫರ್ ಸಂಸ್ಥೆಯ ಅಧ್ಯಕ್ಷ ವಿನೋದ್ ಕಾಂಚನ್ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಸಂಸ್ಥೆಯ ಗೌರವ ಅಧ್ಯಕ್ಷ ರವಿ ಕಟಪಾಡಿ, ಜಿಲ್ಲಾ ಕ್ರೀಢಾ ಕಾರ್ಯದರ್ಶಿ ಶ್ರೀನಿವಾಸ್ ಐತಾಳ್, ಉಪಾಧ್ಯಕ್ಷ ಸಚಿನ್ ಉಚ್ಚಿಲ, ಕೋಶಾಧಿಕಾರಿ ಆರ್. ಎಸ್. ಭಟ್, ಜೊತೆ ಕಾರ್ಯದರ್ಶಿ ಪ್ರಕಾಶ್ ಹೆಜಮಾಡಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.