ಉಡುಪಿ: ಹೊಸ ವರ್ಷಾಚರಣೆಗೆ ನಿಗಾ: ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ

ಉಡುಪಿ: ಹೊಸ ವರ್ಷಚರಣೆಯ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರವನ್ನು ವಹಿಸಿಕೊಳ್ಳಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಟಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.

ಹಲವೆಡೆ ಹೊಸ ವರ್ಷಚರಣೆ ಸಂಭ್ರಮಾಚರಣೆ ನಡೆಸಲು ಅನುಮತಿ ನೀಡಲಾಗಿದೆ.ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಹತ್ತು ಗಂಟೆ ವರೆಗೆ ಸೌಂಡ್ಸ್ ಗೆ ಅವಕಾಶ ಇದ್ದು, ಬಳಿಕ ನಿಲ್ಲಿಸುವಂತೆ ಸೂಚಿಸಲಾಗಿದೆ.ತಡ ರಾತ್ರಿ ವರೆಗರ ಡಿಜೆ ಸೌಂಡ್ ಗಳಿಗೆ ಅವಕಾಶ ನೀಡಲಾಗಿಲ್ಲ.ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಅಷ್ಟೇ ಅಲ್ಲದೇ ನೈತಿಕ ಪೊಲೀಸ್ ಗಿರಿ ಮಾಡುವವರ ಬಗ್ಗೆ ಹೆಚ್ಚಿನ ನಿಗಾ ಇರಿಸಲಾಗಿದೆ.

ಹೊಸ ವರ್ಷಚಾರಣೆ ಸಂಧರ್ಭ ಪ್ರವಾಸಿಗರು ಹೆಚ್ಚಿನಸಂಖ್ಯೆಯಲ್ಲಿ ಅಗಮಿಸುವ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್ ತಂಡಗಳು ನಿಯೋಜಿಸಲಾಗಿದೆ.ಹೋಂಸ್ಟೇ ಹಾಗೂ ರೆಸಾರ್ಟ್‌ಗಳ ಮೇಲೆ ನಿಗಾ ಇರಿಸಲಾಗಿದೆ ಎಂದರು.

Related Posts

Leave a Reply

Your email address will not be published.