ಬೆಳ್ಳಂಬೆಳಗ್ಗೆ ಉಡುಪಿಗೆ ಆಗಮಿಸಿದ ವರುಣ

ಉಡುಪಿ : ಬಿಸಿಲ ಬೇಗೆಯಲ್ಲಿ ಕಂಗೆಟ್ಟ ಉಡುಪಿಯ ಜನತೆಗೆ ಇಂದು ಕೊಂಚ ನಿಟ್ಟುಸಿರು ಬಿಡುವಂತಾಯಿತು. ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಉಡುಪಿ ನಗರದೆಲ್ಲೆಡೆ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದ ಮಳೆಯಾಗಿದೆ. ಉದ್ಯೋಗ ಹಾಗೂ ಇನ್ನಿತರ ಉದ್ದೇಶಕ್ಕಾಗಿ ತೆರಳಿದ ಜನರಿಗೆ ಏಕಾಏಕಿ ಸುರಿದ ಮಳೆಯಿಂದ ಸ್ವಲ್ಪ ಸಮಸ್ಯೆಯಾದರೂ, ಇಳೆ ತಂಪಾಯಿತೆಂಬ ಸಮಾಧಾನ ತಂದಿತು. ಬೇರೆ ಊರಿಂದ ಉಡುಪಿಗೆ ಬಂದ ಜನರಿಗೆ ಮಳೆರಾಯ ತಂಪೆರೆದು ಸ್ವಾಗತ ಕೋರಿದನು.