ಉದ್ಯಾವರ : ಅಂಡರ್ ಪಾಸ್ ನಿರ್ಮಾಣಕ್ಕೆ ಆಗ್ರಹ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿರುವ ಉದ್ಯಾವರದಲ್ಲಿ ಅಂಡರ್ ಪಾಸ್ ನಿರ್ಮಿಸಿ ರಸ್ತೆಯ ಇಕ್ಕೆಡೆಗಳಲ್ಲಿರುವವರಿಗೆ ಆಚೀಚೆ ದಾಟಲು ಸೌಕರ್ಯವನ್ನು ಒದಗಿಸಿ ಕೊಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಊರವರು ನಡೆಸುತ್ತಿರುವ ಪ್ರತಿಭಟನಾ ಧರಣಿಗೆ ಅಧಿಕೃತರ ಭಾಗದಿಂದ ಸ್ಪಂದನೆ ಇಲ್ಲದೇ ಇರುವ ಹಿನ್ನೆಯಲ್ಲಿ ಧರಣಿಯನ್ನು ಅನಿರ್ಧಿಷ್ಟಾವಧಿಗೆ ಮುಂದುವರಿಸಿದ್ದಾರೆ.
ಮಂಜೇಶ್ವರ ಶಾಸಕ ಎಕೆ ಎಂ ಅಶ್ರಫ್ ರವರ ಕಚೇರಿಯಲ್ಲಿ ಯುಎಲ್‍ಸಿ ಗುತ್ತಿಗೆದಾರರ ಉಪಸ್ಥಿತಿಯಲ್ಲಿ ಹೋರಾಟ ಸಮಿತಿಯ ನೇತಾರರೊಂದಿಗೆ ನಡೆಸಿದ ಚರ್ಚೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರೀಜನಲ್ ಕಚೇರಿಯಿಂದ ಅಂಡರ್ ಪಾಸ್‍ಗೆ ಅನುಮತಿ ಸಿಗದ ಕಾರಣ ನಮ್ಮಿಂದ ಅಂಡರ್ ಪಾಸ್ ನಿರ್ಮಿಸಿ ಕೊಡಲು ಸಾಧ್ಯವಿಲ್ಲವೆಂದು ಹೇಳಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಲಾಗಿದೆ.

ಕೂಡಲೇ ಶಾಸಕರು ಹಾಗೂ ಹೋರಾಟ ಸಮಿತಿ ನೇತಾರರು ಧರಣಿ ವೇದಿಕೆಗೆ ಆಗಮಿಸಿ ಶಾಸಕರ ನೇತೃತ್ವದಲ್ಲಿ ಕಾಮಗಾರಿಯನ್ನು ತಡೆದು ಪ್ರತಿಭಟಿಸಲು ತಯಾರಿ ನಡೆಸುತ್ತಿರುವ ಮಧ್ಯ ದೂರವಾಣಿ ಮೂಲಕ ಶಾಸಕರನ್ನು ಸಂಪರ್ಕಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸದ್ಯಕ್ಕೆ ತಾವುಗಳು ಕಾಮಗಾರಿ ತಡೆಯ ಬೇಡಿ ಸ್ವಲ್ಪ ಕಾಲವಕಾಶ ಕೊಟ್ಟರೆ ಇನ್ನೊಂದು ಬಾರಿ ನಾವು ಮೇಲಾಧಿಕಾರಿಗಳಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತಿಳಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಎಂಟನೇ ದಿನಕ್ಕೆ ಕಾಲಿಟ್ಟಿರುವ ಪ್ರತಿಭಟನಾ ಧರಣಿಯನ್ನು ಅನಿರ್ಧಿಷ್ಟಾವಧಿ ಕಾಲಕ್ಕೆ ಮುಂದುವರಿಸಿರುವುದಾಗಿ ಶಾಸಕರು ತಿಳಿಸಿದರು. ಈ ಸಂದರ್ಭ ರಾಷ್ಟೀಯ ಹೆದ್ದಾರಿ ನೇತಾರರ ಸಹಿತ ಊರಿನ ಹಲವಾರು ಮಂದಿ ಪ್ರತಿಭಟನಾ ಧರಣಿ ನಡೆಯುವ ಸ್ಥಳದಲ್ಲಿ ಜಮಾಯಿಸಿದ್ದರು.
