ಉಗ್ಗೆಲ್ ಬೆಟ್ಟು ಗರಡಿ ಬಳಿ “ಕೆಸರ್ಡ್ ಕುಸಲ್” ಕಾರ್ಯಕ್ರಮ
ಬ್ರಹ್ಮಾವರ : ಕಮಾಂಡರ್ ಸ್ಪೋರ್ಡ್ಸ್ ಮತ್ತು ಆರ್ಟ್ ಕ್ಲಬ್ ಉಗ್ಗೇಲ್ ಬೆಟ್ಟು ಮತ್ತು ಸಹೋದರ ಸಂಘಟನೆಗಳ ವತಿಯಿಂದ ಕೆಸರ್ಡ್ ಕುಸಲ್ ಎಂಬ ಕಾರ್ಯಕ್ರಮವವು ಉಗ್ಗೆಲ್ ಬೆಟ್ಟು ಗರಡಿಬಳಿಯ ಗದ್ದೆಯಲ್ಲಿ ಜರುಗಿತು.
ಉಡುಪಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಸಾಂಪ್ರದಾಯಕವಾಗಿ ಕಳಸೆಗೆÀ ಭತ್ತವನ್ನು ಸುರಿದು ಹಣತೆ ದೀಪ ಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ಜನಾಂಗದ ಮಕ್ಕಳಿಗೆ ಮಣ್ಣು, ಕೃಷಿ ಇದನ್ನು ಪರಿಚಯಿಸಲು ಇಂತಹ ಕಾರ್ಯಕ್ರಮಗಳಿಂದ ಸಾದ್ಯ ಎಂದರು.
ಕಾರ್ಯಕ್ರಮದಲ್ಲಿ ಕಲಾವಿದೆ ಚಂದ್ರಕಲಾ ರಾವ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಲಭ್ ಅಧ್ಯಕ್ಷ ಮಹೇಶ್ ಕೋಟ್ಯಾನ್, ಉದ್ಯಮಿ ಚೇತನ್ ಶೆಟ್ಟಿ, ಅಶ್ವಿನ್ ರೋಚ್, ಗಾಯತ್ರಿ, ಸತೀಶ್ ಪೂಜಾರಿ, ರಮೇಶ್ ಕರ್ಕೆರಾ, ಜಯಕರ, ಸೋಮ ಪೂಜಾರಿ ಇನ್ನಿತರು ಉಪಸ್ಥಿತರಿದ್ದರು.
ವಿಶೇಷವಾಗಿ ಕೆಸರು ಗದ್ದೆಯಲ್ಲಿ ಚಿಕ್ಕ ಮಕ್ಕಳಿಂದ ಆಟಗಳು, ನಾನಾ ಸ್ಫರ್ಧೆಯ ಬಳಿಕ, ದೊಡ್ಡವರಿಂದ ವಾಲಿಬಾಲ್, ಹಗ್ಗ ಜಗ್ಗಾಟ ಇನ್ನಿತರ ಕ್ರೀಡೆಗಳು ಜರುಗಿತು.