ಉಳ್ಳಾಲ: ನೈತಿಕ ಪೊಲೀಸ್ ಗಿರಿ ಪ್ರಕರಣ – ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅರುಣ್ ಪುತ್ತಿಲ

ಉಳ್ಳಾಲ: ಸೋಮೇಶ್ವರ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದ ಮೂವರು ವಿದ್ಯಾರ್ಥಿನಿಯರ ಪೋಷಕರನ್ನು ಠಾಣೆಗೆ ಕರೆಸಿ ವಾಸ್ತವ ವಿಚಾರವನ್ನು ತಿಳಿದುಕೊಳ್ಳಬೇಕಿದೆ. ಹಿಂದೂ ಕಾರ್ಯಕರ್ತರಿಗೆ ಘಟನೆ ಬಗ್ಗೆ ಕಿರುಕುಳ ನೀಡುವುದು, ಠಾಣೆಗೆ ಕರೆಸುವುದು ಮಾಡಬಾರದು ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಹೇಳಿದ್ದಾರೆ.

ಸೋಮೇಶ್ವರ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರ ಬಂಧನ ವಿಚಾರವಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿಗಳ ಜೊತೆಗೆ ಮಾತನಾಡಿದರು.
ಸೋಮೇಶ್ವರದ ಘಟನೆ ಯಾವ ರೀತಿ ತನಿಖೆಯಾಗಿದೆ ಎಂಬುದನ್ನು ತಿಳಿಯಲು ಠಾಣೆಗೆ ಭೇಟಿ ಕೊಟ್ಟಿದ್ದೇನೆ. ಪ್ರಕರಣದಲ್ಲಿ ಪಾರದರ್ಶಕವಾದ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದ್ದೇನೆ. ಮೂವರು ವಿದ್ಯಾರ್ಥಿನಿಯರನ್ನು ಪೋಷಕರನ್ನು ಕರೆದು ವಾಸ್ತವ ವಿಚಾರ ತಿಳಿದುಕೊಳ್ಳಬೇಕು. ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ಗಸ್ತು, ಸಿಸಿಟಿವಿ ಅಳವಡಿಸಬೇಕು ಹಾಗೂ ಗಸ್ತು ನೀಡುವ ವಿಶ್ವಾಸವನ್ನು ಇಲಾಖೆ ನೀಡಿದೆ.

ಮುಂದೆ ಇಂತಹ ಘಟನೆ ನಡೆಯಲು ಅವಕಾಶ ಮಾಡಿಕೊಡಬಾರದು. ಎಲ್ಲರೂ ಸಾಮಾಜಿಕ ಬದ್ಧತೆಯೊಂದಿಗೆ ವರ್ತಿಸಿ ಇಂತಹ ಘಟನೆಗಳು ನಡೆದಾಗ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡಬೇಕು ಎಂದರು. ಈ ಸಂದರ್ಭ ಕೆ.ಆರ್ ಶೆಟ್ಟಿ ಅಡ್ಯಾರ್, ಶಿವಾನಂದ ವಿಟ್ಲ, ಅಶ್ವಿನ್ ಕೊಲ್ಯ, ಅರುಣ್ ಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.