ಮಣ್ಣಗುಡ್ಡ : ವೇದವ್ಯಾಸ ಕಾಮತ್ ಪರ ಮಹಿಳಾ ಮೋರ್ಚಾದಿಂದ ಮತಯಾಚನೆ
ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಣ್ಣಗುಡ್ಡ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಮಹಿಳಾ ಮೋರ್ಚಾದಿಂದ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಲಾಯಿತು.
ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರಿಗೆ ನೀಡುವ ಮೂಲಕ ಮತ್ತೊಮ್ಮೆ ಅವರನ್ನು ಬಹುಮತದಿಂದ ಗೆಲ್ಲಿಸಬೇಕಾಗಿ ಕೇಳಿಕೊಳ್ಳುತ್ತೇನೆ.” ಎಂದು ವೇದವ್ಯಾಸ ಕಾಮತ್ ಅವರ ಪತ್ನಿ ವೃಂದಾ.ವಿ.ಕಾಮತ್ ಅವರು ಮನವಿ ಮಾಡಿದರು
ಮನೆ ಮನೆಗೆ ಭೇಟಿ ಸಂದರ್ಭದಲ್ಲಿ ಮಂಜುಳಾ ಅನಿಲ್ ರಾವ್, ಪೂಜಾ ಪ್ರಶಾಂತ್ ಪೈ,
ಸಂಧ್ಯಾ ಮೋಹನ್ ಆಚಾರ್ಯ, ವಿನಯ ಸಂತೋಷ್ ಶೆಟ್ಟಿ, ಗೀತ ಶಿವು ದೇಶ್ಕೋಡಿ, ವಿನಯ ಕಾಮತ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು