ಹಿಂದುಳಿದ ವರ್ಗಗಳು ಒಂದಾಗುವ ಅಗತ್ಯವಿದೆ : ಮಾಜಿ ಸಚಿವ ವಿನಯಕುಮಾರ್ ಸೊರಕೆ
ಹಿಂದುಳಿದ ವರ್ಗಗಳ ಮೀಸಾಲಾತಿಗಳನ್ನು ರದ್ದುಮಾಡಿ, ಅದನ್ನು ಮೇಲ್ವರ್ಗಗಳಿಗೆ ನೀಡುವ ಕೆಲಸವನ್ನು ಬಿಜೆಪಿ ಸರ್ಕಾರ ನಡೆಸುತ್ತಿದ್ದು, ಆ ನಿಟ್ಟಿನಲ್ಲಿ ಕೆಲವರ್ಗದ ನಾವೆಲ್ಲಾ ಒಂದಾಗುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಮಾಜಿ ಸಚಿವರೂ…ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯೂ ಆದ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.ಅವರು ಎರ್ಮಾಳು ಲಕ್ಷ್ಮೀ ಜನಾರ್ದನ ದೇವಸ್ಥಾನ, ವೀರಭದ್ರ ದೇವಸ್ಥಾನ, ನಡಿಯಾಲು ಧೂಮಾವತಿ ದೈವಸ್ಥಾನ ಮುಂತಾದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮಾತನಾಡಿದರು. ಈ ಹಿಂದೆ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ, ಗೋಧಿ, ಸೀಮೆ ಎಣ್ಣೆ, ಕಡಲೆಬೇಳೆ, ಸಕ್ಕರೆ ಎಲ್ಲವೂ ಸಿಗುತ್ತಿತ್ತು ಆದರೆ ಇದೀಗ ಬಡವರ ಹೊಟ್ಟೆಗೆ ಕತ್ತರಿ ಹಾಕಿದ ಸರ್ಕಾರ ಎಲ್ಲವನ್ನೂ ರದ್ದುಗೊಳಿಸಿ ಇದೀಗ ಹತ್ತು ಕೆ.ಜಿ. ನೀಡುತ್ತಿದ್ದ ಅಕ್ಕಿ ಐದಕ್ಕೆ ಇಳಿಸಿದ್ದೇ ಬಿಜೆಪಿ ಸರ್ಕಾರದ ಸಾಧನೆ ಎಂದರು.
ಕಾಂಗ್ರೆಸ್ ಯಾವತ್ತೂ ಮಾದ್ಯಮ ಹಾಗೂ ಬಡ ವರ್ಗದ ಜನರ ಪಕ್ಷ ಮುಂದಿನ ಚುನಾವಣೆಯಲ್ಲಿ ಈ ಪಕ್ಷವನ್ನು ಬೆಂಬಲಿಸುವಂತೆ ವಿನಂತಿಸಿದರು.ಈ ಸಂದರ್ಭ ಪ್ರಮುಖರಾದ ಓಮಯ್ಯ ಪೂಜಾರಿ, ವಿವೇಕ್ ಶೆಟ್ಟಿಗಾರ್, ಚಂದ್ರ ಶೆಟ್ಟಿಗಾರ್, ಬಾಲಚಂದ್ರ, ಕಿಶೋರ್ ಎರ್ಮಾಳ್, ಅರುಣಾ ಕುಮಾರಿ, ವೈ.ದೀಪಕ್ ಕುಮಾರ್, ಸಂತೋಷ್ ಪಡು, ರಾಜು ಪೂಜಾರಿ, ಜಯಂತ ಪೂಜಾರಿ, ಸತೀಶ್ ಪೂಜಾರಿ ಮೋಹನ್ ಪಡು ಮುಂತಾದವರಿದ್ದರು.