ಜಿಲ್ಲಾ ಎಸ್ಪಿಯವರ ತನಿಖೆಯಲ್ಲೂ ಬಿಜೆಪಿಗರಿಗೆ ವಿಶ್ವಾಸವಿಲ್ಲ : ಮಾಜಿ ಸಚಿವ ವಿನಯಕುಮಾರ್ ಸೊರಕೆ
ಉಡುಪಿಯಲ್ಲಿ ಶೌಚಾಲಯ ವಿಡಿಯೋ ನಡೆದಿದೆ ಎಂಬ ಪ್ರಕರಣಕ್ಕೆ ಉತ್ತರ ನೀಡ ಬೇಕಾದವರು ಕಾಲೇಜು ಆಡಳಿತ. ಆದರೆ ಆ ಘಟನೆಯನ್ನು ಹಿಜಾಬಿಗೆ ಹೋಲಿಕೆ ಮಾಡಿಕೊಂಡು ಉಡುಪಿ ಶಾಸಕರೇ ಸೇರಿ ಡೊಂಬರಾಟ ನಡೆಸುತ್ತಿದ್ದಾರೆ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವ್ಯಂಗವಾಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಆಡಳಿತದಲ್ಲಿರುವ ಸಂದರ್ಭದಲ್ಲೇ ಅವರೇ ಕರೆತಂದ ಜಿಲ್ಲಾ ಎಸ್ಪಿಯವರ ತನಿಖೆಯಲ್ಲೂ ಬಿಜೆಪಿಗರಿಗೆ ವಿಶ್ವಾಸವಿಲ್ಲದಂತಾಗಿದೆ. ಮಹಿಳಾ ಆಯೋಗಕ್ಕೆ ದೂರು ನೀಡಿ ಅಲ್ಲಿಂದ ಬಂದ ಖುಷ್ಬೋ ಸುಂದರ್ ಪರಿಶೀಲನೆ ನಡೆಸಿದ್ದಾರೆ. ಈ ವಿಚಾರ ತಿಳಿದುಕೊಂಡು ಪೂರಕ ಹೇಳಿಕೆ ನೀಡಿದರೂ ಬಿಜೆಪಿಗರು ಅದರ ವಿರುದ್ಧ ಧ್ವನಿ ಎತ್ತಿರುವುದು ಇವರ ಡೊಂಬರಾಟಕ್ಕೆ ಸಾಕ್ಷಿ ಎಂದು ವಿನಯಕುಮಾರ್ ಸೊರಕೆ ಹೇಳಿದರು.