ಚುನಾವಣಾ ನೀತಿ ಸಂಹಿತೆ ಹಿನ್ನೆಲೆ : ವಿಟ್ಲ ವ್ಯಾಪ್ತಿಯಲ್ಲಿ ತಪಾಸಣಾ ಕೇಂದ್ರಗಳ ಸ್ಥಾಪನೆ

ವಿಟ್ಲ: ಚುನಾವಣಾ ನೀತಿ ಜಾರಿಯಾಗುತ್ತಿದ್ದಂತೆ ತಪಾಸಣಾ ಕೇಂದ್ರಗಳನ್ನು ಅಳವಡಿಸಲಾಗಿದೆ. ಶಾಶ್ವತವಾದ ಚೆಕ್ ಪೆÇೀಸ್ಟ್ ಹೊರತಾಗಿ ಬಿಟ್ಟಿರುವ ರಸ್ತೆಗಳನ್ನು ಸೇರಿಸಿ ಒಳ ಮಾರ್ಗಗಳಿಗೆ ಹೆಚ್ಚುವರಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮುಂದಿನ ಎರಡು ದಿನದಲ್ಲಿ ಪ್ಯಾರಾ ಮಿಲಿಟರಿಯನ್ನು ಕರೆಸಿಕೊಳ್ಳಲಾಗುತ್ತಿದ್ದು, ಅವರಿಂದಲೂ ತಪಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಪಶ್ಚಿಮ ವಲಯ ಐ.ಜಿ. ಡಾ. ಚಂದ್ರಗುಪ್ತ ಹೇಳಿದರು.

ಚುನಾವಣಾ ಹಿನ್ನಲೆಯಲ್ಲಿ ವಿಟ್ಲ ಠಾಣೆಗೆ ಮಂಗಳವಾರ ಬೇಟಿ ನೀಡಿ ಸಾರ್ವಜನಿಕರ ಸಭೆಯನ್ನು ನಡೆಸಿ, ವಿವಿಧ ಗಡಿ ಭಾಗದ ತಪಾಸಣಾ ಕೇಂದ್ರಗಳನ್ನು ಪರಿಶೀಲನೆ ನಡೆಸಿ ಮಾಧ್ಯಮಗಳ ಜತೆಗೆ ಮಾತನಾಡಿದರು.

ಠಾಣೆ ಅಥವಾ ಹೊರ ಠಾಣೆಯನ್ನು ಸ್ಥಾಪನೆ ಮಾಡಿದ ಮೇಲೆ ಸಾರ್ವಜನಿಕರ ಅನುಕೂಲಕ್ಕೆ ನಿತ್ಯ ತೆರೆಯಲಾಗುತ್ತದೆ. ನೆಲ್ಲಿಕಟ್ಟೆ ಹಾಗೂ ಆನೆಕಲ್ಲು ಭಾಗದಲ್ಲಿ ಚೆಕ್ ಪೊಸ್ಟ್ ಇದ್ದು, ಸಿಬ್ಬಂದಿಗಳು ಮಾತ್ರ ಕನ್ಯಾನದಲ್ಲಿ ತಪಾಸಣೆ ಮಾಡುವ ಕಾರ್ಯ ಮಾಡಬಾರದು. ಕನ್ಯಾನ ಹೊರ ಠಾಣೆಯ ಸ್ಥಾಪನೆಯ ಉದ್ದೇಶ ಹಾಗೂ ತಪಸಣಾ ಕೇಂದ್ರದ ಪ್ರತ್ಯೇಕ ಸ್ಥಳದಲ್ಲಿ ಸ್ಥಾಪನೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

vitla

ಈ ತಪಾಸಣಾ ಕಾರ್ಯ ಆರಂಭವಾಗಿದ್ದು, ಮುಂದಿನಟ ದಿನದಲ್ಲಿ ಇನ್ನಷ್ಟು ಬಿಗಿಯಾಲಿದೆ. ಠಾಣೆಯನ್ನು ಮೇಲ್ದರ್ಜೆಗೇರಿಸುವುದರಿಂದ ಜನರಿಗೆ ಸೇವೆಗಳು ತಕ್ಷಣಕ್ಕೆ ಸಿಗಲಿ ಎಂಬ ಕಾರಣಕ್ಕಾಗಿದೆ. ಸಿಬ್ಬಂದಿ ಹೆಚ್ಚಳವಾಗಿ, ಸಿಬ್ಬಂದಿಗಳ ಕಾರ್ಯ ವ್ಯಾಪ್ತಿ ಸುಧಾರಿಸಿ ಎರಡು ಮೂರು ವರ್ಷದಲ್ಲಿ ಸುದಾರಿಸುತ್ತದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ ವಿಕ್ರಂ ಅಮಟೆ, ಡಿವೈಎಸ್‍ಪಿ ಪ್ರತಾಪ್ ಸಿಂಗ್ ತೋರಾಟ್, ವಿಟ್ಲ ಠಾಣಾಧಿಕಾರಿ ನಾಗರಾಜ್ ಹೆಚ್.ಇ, ವಿಟ್ಲ ಠಾಣಾ ಸಬ್ ಇನ್‍ಸ್ಪೆಕ್ಟರ್ ಸಂದೀಪ್ ಕುಮಾರ್ ಶೆಟ್ಟಿ, ಮತ್ತು ವಿಟ್ಲ ಪೊಲೀಸ್ ಅಧಿಕಾರಿ ವರ್ಗ ಸೇರಿದಂತೆ ಠಾಣಾ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.