ವಿಟ್ಲ: ಖಾಸಗಿ ಬಸ್ ಹಾಗೂ ಪಿಕಪ್ ವಾಹನ ಢಿಕ್ಕಿ: ಹಲವರಿಗೆ ಗಾಯ
ವಿಟ್ಲ: ವಿಟ್ಲ ಕಲ್ಲಡ್ಕ ರಸ್ತೆಯ ಗೋಳ್ತಮಜಲು ಎಂಬಲ್ಲಿ ಖಾಸಗಿ ಬಸ್ಸಿಗೆ ಪಿಕಪ್ ವಾಹನ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡ ಘಟನೆ ನಡೆದಿದೆ.
ವಿಟ್ಲ ಕಡೆಗೆ ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ಒಯ್ಯುತ್ತಿದ್ದ ಪಿಕಪ್ ಆಕಸ್ಮಿಕವಾಗಿ ವಿಟ್ಲದಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿಯಾಗಿದೆ. ಪಿಕಪ್ ನಲ್ಲಿ ಹಲವು ಮಂದಿ ಇದ್ದರೆನ್ನಲಾಗಿದೆ. ಖಾಸಗಿ ಬಸ್‌ನಲ್ಲೂ ಹಲವು ಪ್ರಯಾಣಿಕರಿದ್ದು, ಅಪಘಾತದಿಂದ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.