“ಅಕ್ಷಮ್ಯ” ಚಿತ್ರದ ಟೀಸರ್ ಬಿಡುಗಡೆ
ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ ನಿರ್ಮಾಣದ ಕನ್ನಡ ಚಿತ್ರ ಅಕ್ಷಮ್ಯ ಇದರ ಟೀಸರ್ ಬಿಡುಗಡೆ ಕಾರ್ಯಕ್ರಮ ನಗರದ ಮಾಲೇಮಾರ್ ಬಳಿಯ ಎಸ್ ಡಿಎಂ ಸ್ಟುಡಿಯೋದಲ್ಲಿ ನೆರವೇರಿತು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಟೀಸರ್ ಬಿಡುಗಡೆಗೊಳಿಸಿ ಚಾಲನೆ ನೀಡಿದರು.
ಬಳಿಕ ಮಾತಾಡಿದ ಅವರು, “ಅಕ್ಷಮ್ಯ ಹೊಸಬರೇ ನಿರ್ಮಿಸಿದ ಒಂದು ಹೊಸ ಪ್ರಯತ್ನ. ಟೀಸರ್ ಕುತೂಹಲ ಮೂಡಿಸುತ್ತಿದ್ದು ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದೆ. ಕನ್ನಡ ಚಿತ್ರಪ್ರೇಮಿಗಳು ಈ ಪ್ರಯತ್ನಕ್ಕೆ ಶುಭ ಹಾರೈಸಿದಲ್ಲಿ ಇನ್ನಷ್ಟು ಹೊಸ ಪ್ರಯೋಗಗಳು ಚಿತ್ರರಂಗದಲ್ಲಿ ಬರಲಿವೆ” ಎಂದು ಶುಭ ಹಾರೈಸಿದರು.
ಲಯನ್ ಕಿಶೋರ್ ಡಿ. ಶೆಟ್ಟಿ ನಿರ್ಮಾಪಕರಾಗಿರುವ ಚಿತ್ರಕ್ಕೆ ಪ್ರಭು ಉಡುಪಿ, ಮೋಹನ್ ಕೊಪ್ಪಲ ಕದ್ರಿ, ಲೋಹಿತ್ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ.
ಶ್ರೀನಿವಾಸ್ ವಿ ಶಿವಮೊಗ್ಗ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಅವಿನಾಶ್ ಕಾವೂರ್ ಛಾಯಾಗ್ರಾಹಣ ಮಾಡಿದ್ದಾರೆ. ಪ್ರಕಾಶ್ ಶೆಟ್ಟಿ, ಅರುಣ್ ಚಂದ್ರ, ಹರೀಶ್ ಬಂಗೇರ, ಸ್ವಾತಿ, ಲತೀಫ್ ಸಾಣೂರ್, ಸುರೇಶ್ ಮಂಜೇಶ್ವರ, ವಿನಾಯಕ್ ಜಪ್ಪು, ಪ್ರೀತಮ್,ಶಿಲ್ಪಾ ಶೆಟ್ಟಿ, ವಿಶ್ವಾಸ್ ಗುರುಪುರ ಚಿತ್ರದಲ್ಲಿ ನಟಿಸಿದ್ದಾರೆ.