ಅದಮಾರು ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ
ಕಾಪು ತಾಲೂಕಿನ ಅದಮಾರು ಮಠದ ಆಧೀನ ಅದಮಾರು ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವಾಗಿದ್ದು, ಇಲ್ಲಿ ಸುತ್ತಲ ಎಂಟು ಶಾಲೆಗಳಿಂದ 235ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಜರಾಗಿದ್ದಾರೆ.
ಪಡುಬಿದ್ರಿ ಲಯನ್ಸ್ ಆಂಗ್ಲ ಮಾದ್ಯಮ, ಸಾಗರ್ ವಿದ್ಯಾ ಮಂದಿರ್ ಆಂಗ್ಲ ಮಾದ್ಯಮ, ಗಣಪತಿ ಪ್ರೌಢಶಾಲೆ ಪಡುಬಿದ್ರಿ, ಎರ್ಮಾಳ್ ತೆಂಕ ಸರ್ಕಾರಿ , ಎರ್ಮಾಳು ಬಡಾ ಸರ್ಕಾರಿ ಪ್ರೌಢಶಾಲೆ, ಎರ್ಮಾಳು ವಿದ್ಯಾ ಪ್ರಭೋಧಿನಿ ಆಂಗ್ಲ ಮಾದ್ಯಮ, ಹಾಗೂ ಮಾತೃ ಶಾಲೆ ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆಯ ಕನ್ನಡ ಹಾಗೂ ಆಂಗ್ಲ ಮಾದ್ಯಮ ಶಾಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಗಮಿಸಿದ್ದಾರೆ.ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಸರ್ಕಾರದ ಸೂಚನೆಯಂತೆ ಎಲ್ಲಾ ಕೋವಿಡ್ ನಿಯಮಗಳನ್ನು ಮಾತೃಶಾಲಾ ಶಿಕ್ಷಕಿ ಶಿಕ್ಷಕ ವೃಂದವನ್ನು ಬಳಸಿ ಅಚ್ಚುಕಟ್ಟಾಗಿ ಪಾಲಿಸಲಾಗುತ್ತಿದ್ದು, ಸರ್ಕಾರದ ವತಿಯಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊಡಮಾಡಿದ ಮುಖ ಮಾಸ್ಕ್ ಗಳನ್ನು ವಿತರಿಸಲಾಯಿತು.
ಒಂದು ಪರೀಕ್ಷಾ ಕೊಠಡಿಯಲ್ಲಿ ಶಿಕ್ಷಣ ಇಲಾಖೆಯ ಆದೇಶದಂತೆ12 ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆಯಾದರೂ ದೊಡ್ಡ ಹಾಲ್ ಗಳಲ್ಲಿ 16 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದ್ದು ಕಡ್ಡಾಯವಾಗಿ ಒರ್ವ ವಿದ್ಯಾರ್ಥಿಗಳ ಮಧ್ಯೆ ಆರು ಅಡಿ ಅಂತರ ಇರಿಸಲಾಗಿದೆ. ನಮ್ಮ ಸಂಸ್ಥೆಯಿಂದ ಕರ್ತವ್ಯಕ್ಕೆ ಹಾಜರಾದ ಎಲ್ಲಾ ಸಿಬ್ಬಂದಿಗಳಿಗೆ ಕೊವೀಡ್ ಪ್ರಥಮ ಲಸಿಕೆ ನೀಡಲಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ವಿಚಾರಗಳಲ್ಲೂ ಸಂಸ್ಥೆ ಬಹಳ ಕಾಳಜಿ ವಹಿಸಿದೆ, ಅದಲ್ಲದೆ ಮಕ್ಕಳಿಗೆ ಪರಿಪೂರ್ಣ ಮಾಹಿತಿಯನ್ನು ಮೈಕ್ ಮೂಲಕ ಕಾಲಕಾಲಕ್ಕೆ ಪರೀಕ್ಷೆಗೆ ಮುನ್ನ ತಿಳಿಸುವ ವ್ಯವಸ್ಥೆಯನ್ನುಕಲ್ಪಿಸಲಾಗಿದೆ ಎಂಬುದಾಗಿ ಸಂಸ್ಥೆಯ ಹಿರಿಯ ಶಿಕ್ಷಕ ಶ್ರೀಕಾಂತ್ ರಾವ್ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.