ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದ ಉಡುಪಿ ಅದಮಾರು ಮಠದ ಶ್ರೀಗಳು
ಮಂಗಳೂರು: ಕಾಂಗ್ರೆಸ್ನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಯೆನೆಪೋಯಾ ಆಸ್ಪತ್ರೆಗೆ ಉಡುಪಿ ಅದಮಾರು ಮಠದ ವಿಶ್ವಪ್ರೀಯ ತಿರ್ಥ ಸ್ವಾಮೀಜಿ ಭೇಟಿ ನೀಡಿ ಅರೋಗ್ಯ ವಿಚಾರಿಸಿದ್ರು.
ಇದೇ ವೇಳೆ ಆಸ್ಕರ್ ಕುಟುಂಬಿಕರಿಗೆ ಧೈರ್ಯ ತುಂಬಿದರು. ಅದಮಾರು ಮಠ, ಗುರುಗಳು ಅಂದರೆ ಅಸ್ಕರ್ ಅವರಿಗೆ ಬಹಳ ಗೌರವ, ಇವರ ತಂದೆಯವರು ನಮ್ಮ ಗುರುಗಳಿಗೆ ಹೆಡ್ ಮಾಸ್ಟರ್ ಅಗಿದ್ದವರು. ಆಸ್ಕರ್ ಅವರು ಮಾಡಿದ ಸಮಾಜ ಸೇವೆ ಅನನ್ಯ. ನಮ್ಮೆಲ್ಲಾರ ಪ್ರಾರ್ಥನೆಯಿಂದ ಬೇಗನೆ ಚೇತರಿಕೆಯಾಗಿ ಮತ್ತೆ ಮೊದಲಿನಂತೆ ಅಗ್ಬೇಕು ಅದಕ್ಕೆ ನಾವೆಲ್ಲರೂ ಪ್ರಾರ್ಥಿಸಬೇಕಿದೆ. ಇದು ನಮ್ಮ ಕರ್ತವ್ಯ ಎಂದರು.