ಮೂಡಬಿದಿರೆ : ಮಾ. 23ರಂದು ದೊಡ್ಡಮನೆ ರಸ್ತೆಯಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ
ಸಾರ್ವಜನಿಕ ಶ್ರೀ ಶನಿಪೂಜಾ ಸಮಿತಿ ದೊಡ್ಡಮನೆ ರಸ್ತೆ ಮೂಡಬಿದಿರೆ ಇದರ ಆಶ್ರಯದಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಮಾರ್ಚ್ 23ರಂದು ದೊಡ್ಡಮನೆ ರಸ್ತೆಯ ಅಶ್ವತ್ಥಕಟ್ಟೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಮಾರೂರು ಖಂಡಿಗ ಶ್ರೀಯುತ ರಾಮದಾಸ ಅಸ್ರಣ್ಣ ಅವರ ನೇತೃತ್ವದಲ್ಲಿ ಶನಿಪೂಜೆಯು ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ಕಟ್ಟೆಯಲ್ಲಿ ನಾಗಬನಕ್ಕೆ ನಾಗತಂಬಿಲ, ಸಂಜೆ 6 ಗಂಟೆಗೆ ಕಲಶ ಪ್ರತಿಷ್ಠೆ, ಸಂಜೆ 6.30ಕ್ಕೆ ಶನಿಪೂಜೆ ಪ್ರಾರಂಭ, ರಾತ್ರಿ 9.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಶ್ರೀ ಶನೈಶ್ಚರ ದೇವರ ಪೂಜೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಮಿತಿಯ ಅಧ್ಯಕ್ಷರು ಹಾಗು ಸರ್ವ ಸದಸ್ಯರು ವಿನಂತಿಸಿದ್ದಾರೆ.