ಉಡುಪಿಯಲ್ಲಿ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಠಮಿ
ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ.ಶ್ರೀ ಕೃಷ್ಣ ಮಠದಲ್ಲಿ ಕೊವಿಡ್ ನಿಯಮಾವಳಿ ಅನುಸರಿಸಿ ಸರಳವಾಗಿ ಜನ್ಮಾಷ್ಟಮಿ ಅಚರಿಸಲಾಯಿತು. ಪರ್ಯಾಯ ಶ್ರೀಪಾದರಿಂದ ಶ್ರೀ ಕೃಷ್ಣ ದೇವರನ್ನು ವಿಶೇಷವಾಗಿ ಅಲಂಕರಿಸಿ, ತುಳಸಿ ಅರ್ಚನೆಯನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪರ್ಯಾಯ ಶ್ರೀ ಈಶ ಪ್ರಿಯರು, ಅದಮಾರು ಹಿರಿಯ ಶ್ರೀ ಗಳಾದ ವಿಶ್ವ ಪ್ರಿಯ ಶ್ರೀಪಾದರು, ಕೃಷ್ಣಪುರ ಮಠದ ವಿದ್ಯಾ ಸಾಗರ ಶ್ರೀಪಾದರು, ಕಾಣಿಯೂರು ಮಠದ ವಿಶ್ವ ವಲ್ಲಭ ಶ್ರೀ ಪಾದರು, ಶ್ರೀ ಕೃಷ್ಣ ದೇವರಿಗೆ ಅರ್ಘ್ಯ ಪ್ರಧಾನ ಮಾಡಿದರು. ಬಳಿಕ ಚಂದ್ರೋದಯ ಸಮಯದಲ್ಲಿ ತುಳಸಿ ಕಟ್ಟೆಯಲ್ಲಿ ಶ್ರೀಪಾದರುಗಳಿಂದ ಚಂದ್ರನಿಗೆ ಅರ್ಘ್ಯ ಪ್ರಧಾನ ಮಾಡಲಾಯಿತು. ಬಳಿಕ ಸೇರಿದ್ದ ಭಕ್ತರು ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರಧಾನ ನಡೆಸಿದರು.