ಎನ್ಎಂಪಿಟಿಯಲ್ಲಿ ಸಮುದ್ರಕ್ಕೆ ಉರುಳಿದ ಕಂಟೈನರ್ ಲಾರಿ: ಚಾಲಕ ಮೃತ್ಯು: ಓರ್ವ ನಾಪತ್ತೆ
ನವಮಂಗಳೂರು ಬಂದರಿನ 14ನೇ ಬರ್ತ್ನಲ್ಲಿ 10ಚಕ್ರದ ಕಂಟೈನರ್ ಲಾರಿಯೊಂದು ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಕಂಟೈನರ್ ಲಾರಿ ಚಾಲಕ ಉತ್ತರ ಕರ್ನಾಟಕ ಮೂಲದ ರಾಜೇಸಾಬ (24) ಎಂಬವರ ಮೃತದೇಹ ಪತ್ತೆಯಾಗಿದ್ದು, ಲಾರಿ ಕ್ಲೀನರ್ ಭೀಮಪ್ಪ (35) ನಾಪತ್ತೆಯಾಗಿದ್ದಾರೆ. ಭೀಮಪ್ಪ ಅವರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.