ಬೈಂದೂರು: ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಕುಂದಾಪುರದ ಸೇನಾಪುರ ಸತತ 5 ಬಾರಿ ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಸೇನಾಪುರ ಭಾಗದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೃಹತ್ ಪ್ರತಿಭಟನೆ ನಡೆಯಿತು.

ಶಾಸಕ ಗುರುರಾಜ್ ಗಂಟಿಹೊಳೆ ಅವರು, ಕೊಂಕಣ ರೈಲ್ವೆ ಹೋರಾಟ ಸಮಿತಿ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಕರಾವಳಿ ಭಾಗದ ಜನರ ಜೀವನದ ಕೊಂಡಿ ಆಗಿರುವ ಕೊಂಕಣ ರೈಲು ಸೇವೆ ಎನ್ನುವುದು ಸ್ಥಳೀಯ ಜನರಿಗೆ ಮರೀಚಿಕೆಯಾಗಿದ್ದು ಸೇನಾಪುರ ರೈಲು ನಿಲ್ದಾಣದಲ್ಲಿ ಮುಂಬಯಿ ಮತ್ತು ಬೆಂಗಳೂರು ಎಕ್ಸ್ ಪ್ರೆಸ್ ರೈಲು ನಿಲುಗಡೆ ಮಾಡಲು ಸಂಸದರ ಜತೆ ಸೇರಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು.

ಶಿವಮೊಗ್ಗ ಲೋಕಸಭಾ ಸಂಸದರಾದ ಬಿ ವೈ ರಾಘವೇಂದ್ರ ಅವರು ಕರೆ ಮೂಲಕ ಮಾತನಾಡಿ,
ಬೈಂದೂರು ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಗೊಳಿಸಿದಂತೆ ಸೇನಾಪುರ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು. ನಷ್ಟದಲ್ಲಿರುವ ಕೊಂಕಣ ರೈಲು ನಿಗಮವನ್ನು ಸದನ ರೈಲ್ವೆಗೆ ಮರ್ಚ್ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಮಾಜಿ ತಾ.ಪಂ ಅಧ್ಯಕ್ಷ ಶಂಕರ ಶೆಟ್ಟಿ ಬೆಳ್ಳಾಡಿ ಮಾತನಾಡಿ, ಕೋಟ್ಯಾಂತರ ರೂ. ವಿನಿಯೋಗ ಮಾಡಿ ಡಬ್ಬಲ್ ಟ್ರ್ಯಾಕ್ ಹಳಿ ನಿರ್ಮಾಣ ಮಾಡಿದ್ದರೂ ಯೋಜನೆ ಸದ್ಬಳಕೆ ಇನ್ನೂ ಕೂಡ ಆಗಿಲ್ಲ. ದಶಕಗಳಿಂದ ಹಲವಾರು ಹೋರಾಟಗಳನ್ನು ಮಾಡಿದ್ದರೂ ಸರಕಾರ ಯಾವುದೇ ರೀತಿ ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅನ್ಯಾಯ ಎಂದು ಹೇಳಿದರು.

ತಾ.ಪಂ. ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕಡಿಕ್ಕೆ ಮಾತನಾಡಿ, ನಮ್ಮ ಹೋರಾಟಕ್ಕೆ ಸಂಸದರು ಮತ್ತು ಶಾಸಕರು ಸ್ಪಂದಿಸಿರುವುದ ರಿಂದ ಮಾಡಿರುವುದು ಎರಡು ದಶಕಗಳ ಕಾಲದ ಬೇಡಿಕೆ ಈಡೇರಿಕೆ ಆಗುವ ಆಶಾಭಾವನೆ ಮೂಡಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಸುರೇಶ್ ಶೆಟ್ಟಿ, ನಾಡ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ, ಆಲೂರು ಪಂಚಾಯಿತ್ ಮಾಜಿ ಉಪಾಧ್ಯಕ್ಷ ರವಿ ಶೆಟ್ಟಿ , ಹಕ್ಲಾಡಿ ಮಾಜಿ ಅಧ್ಯಕ್ಷ ಚೇತನ್ ಮೊಗವೀರ, ಸುರೇಂದ್ರ ಖಾರ್ವಿ ಗಂಗೊಳ್ಳಿ ಮತ್ತು ಕೆನಡಿ ಪಿರೇರಾ, ಪಂಚಾಯಿತಿ ಸದಸ್ಯ ಬಸವ ನಾಯ್ಕ ಗ್ರಾಮಸ್ಥರು, ಹೋರಾಟ ಸಮಿತಿ ಸದಸ್ಯರು, ರೈಲ್ವೆ ಇಲಾಖೆ ರೀಜನಲ್ ಮ್ಯಾನೇಜರ್ ಬಾಲಸಾಹೇಬ್ ನಿಕ್ಕಮ್, ರೀಜನಲ್ ಟ್ರಾಫಿಕ್ ಮ್ಯಾನೇಜರ್ ವಿನಯ್ ಕುಮಾರ್, ಜನ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ, ಸ್ಟೇಷನ್ ಮಾಸ್ಟರ್ ಸುಕುಮಾರ ಶೆಟ್ಟಿ ,ಗೋಪಾಲಕೃಷ್ಣ ನಾಡ ಉಪಸ್ಥಿತರಿದ್ದರು.

Related Posts

Leave a Reply

Your email address will not be published.