ಕಾಪು ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ: ನಗ ನಗದು ದೋಚಿ ಪರಾರಿ

ಕಾಪು ಠಾಣಾ ವ್ಯಾಪ್ತಿಯ ಮೂಳೂರು ಮುಖ್ಯ ರಸ್ತೆಯ ಬಳಿಯ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ನಗನಗದು ಕಳವು ಗೈದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.


ಮೂಳೂರು ಈಸ್ಟ್ ವೆಸ್ಟ್ ನರ್ಸರಿ ಸಮೀಪದ ಮಹಮ್ಮದ್ ರಫೀಕ್, ಮಧುರ ಕಾಂಪೌಂಡ್ ನಿವಾಸಿ ಇಬ್ರಾಹಿಂ ಹಾಗೂ ಶಹನಾಜ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಅಪಾರ ನಗ ಹಾಗೂ ನಗದು ಕಳವು ಗೈದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಯಾದರೂ ಮೌಲ್ಯ ಇನ್ನಷ್ಟೇ ತಿಳಿದು ಬರ ಬೇಕಾಗಿದೆ. ಈ ಮೂರೂ ಮನೆ ಮಂದಿಗಳು ಮನೆಗೆ ಬೀಗ ಹಾಕಿ ಹೊರ ಹೋಗಿದ್ದನ್ನೇ ಬಂಡವಾಳವನ್ನಾಗಿಸಿದ ಕಳ್ಳರು ಈ ಕೃತ್ಯ ಮಡೆಸಿದ್ದಾರೆ.

ಈ ಮನೆಮಂದಿಗಳ ಚಲನ ವಲನಗಳನ್ನು ಗಮನಿಸುತ್ತಿದ್ದ ವ್ಯಕ್ತಿಗಳು ಈ ಪ್ರಕರಣದಲ್ಲಿ ಬಾಗಿಯಾಗಿರುವುದು ಸ್ಪಷ್ಟವಾಗುತ್ತಿದ್ದು, ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಹಾಗೂ ಕಾಪು ಪಿಎಸ್ಸೈ ರಾಘವೇಂದ್ರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶ್ವಾನದಳ ಸಹಿತ ಬೆರಳಚ್ಚು ತಜ್ಞರು ಆಗಮಿಸಿ ಕಾರ್ಯಚರಿಸುತ್ತಿದ್ದು ಶೀಘ್ರವಾಗಿ ಪ್ರಕರಣ ಬೇಧಿಸುವ ಇರಾದೆ ಹೊಂದಿದೆ. ಈ ಘಟನೆಯಿಂದ ಮೂಳೂರು ಪ್ರದೇಶದ ಮಂದಿ ಆತಂಕಗೊಂಡಿದ್ದು ಕಳ್ಳರನ್ನು ಅತೀ ಶೀಘ್ರವಾಗಿ ಬಂಧಿಸುವಂತೆ ಪೊಲೀಸರಲ್ಲಿ ಆಗ್ರಹಿಸಿದ್ದಾರೆ.

 

Related Posts

Leave a Reply

Your email address will not be published.