ಕಾರಿಂಜ ದೇವಸ್ಥಾನದ ಒಳಗೆ ಪಾದರಕ್ಷೆ ಹಾಕಿ ಪಾವಿತ್ರ್ಯತೆಗೆ ಧಕ್ಕೆ

ಕಾರಿಂಜ ದೇವಸ್ಥಾನದ ಒಳಗೆ ಪಾದರಕ್ಷೆ ಹಾಕಿಕೊಂಡು ಪ್ರವೇಶ ಮಾಡಿರುವುದು ದೇವಳದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ. ಇದು ಭಕ್ತರ ಮನಸ್ಸಿಗೂ ಬೇಸರ ತರುವ ವಿಚಾರವಾಗಿದ್ದು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಪೋಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಶಾಸಕರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಇತಿಹಾಸ ಪ್ರಸಿದ್ಧ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಅಂಗಣಕ್ಕೆ ಅನ್ಯ ಧರ್ಮದ ಯವಕರ ಗುಂಪು ಪ್ರವೇಶಿಸಿ ದೇವಸ್ಥಾನದ ಪಾವಿತ್ರ್ಯತೆಗೆ ದಕ್ಕೆ ತಂದುದಲ್ಲದೇ ದೇವಸ್ಥಾನದ ವಠಾರದಲ್ಲಿ ವಿಕೃತಿ ಮೆರೆದ ವೀಡಿಯೋ ಒಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ. ಈ ವಿಷಯ ತಿಳಿದ ತಕ್ಷಣ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉನ್ನತ ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ತಿಳಿಸಿ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ. ಈ ರೀತಿಯ ಘಟನೆಗಳು ಇತ್ತೀಚೆಗಿನ ದಿನಗಳಲ್ಲಿ ಅಲ್ಲಲ್ಲಿ ನಡೆಯುತ್ತಿದ್ದು ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಂಟ್ವಾಳದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸಿದ ದುಷ್ಕರ್ಮಿಗಳನ್ನು ಮಟ್ಟ ಹಾಕಲು ಕಾನೂನು ರಿತ್ಯ ಕ್ರಮ ಪೋಲಿಸ್ ಇಲಾಖೆ ಕೈಗೊಳ್ಳಲು ಸೂಚಿಸಿದ್ದಾರೆ.

ಕಾರಿಂಜ ದೇವಸ್ಥಾನದ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿ ದೇವಳದ ಪಾವಿತ್ರ್ಯೆಗೆ ಧಕ್ಕೆ ಮಾಡಿದ ಘಟನೆಯನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದ್ದಾರೆ. ಅವರು ಬಂಟ್ವಾಳದಲ್ಲಿ ಮಾಧ್ಯಮದ ವರ ಜೊತೆ ಮಾತನಾಡಿಪೋಲೀಸ್ ನಿರ್ಲಕ್ಷ್ಯ ತನದಿಂದ ದ.ಕ.ಜಿಲ್ಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೆಲಸಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದು, ಇಂತಹ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಅವರಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ದ.ಕ.ಜಿಲ್ಲಾ ಬಿಜೆಪಿ ಒತ್ತಾಯಿಸುತ್ತಿದೆ ಎಂದಿದ್ದಾರೆ. ಹೊರ ರಾಜ್ಯದ ಕೆಲವು ದುಷ್ಕರ್ಮಿಗಳು ಜಿಲ್ಲೆಯ ಶಾಂತಿ ಕೆಡಿಸಲು ಉದ್ದೇಶ ಪೂರ್ವಕವಾಗಿ ಇಲ್ಲಿಯ ಮತಾಂದ ಶಕ್ತಿಗಳ ಜೊತೆ ಸೇರಿಕೊಂಡು ಇಂತಹ ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದರು.

Related Posts

Leave a Reply

Your email address will not be published.