ಕುರು ದ್ವೀಪದ ವಿದ್ಯಾರ್ಥಿನಿಯರನ್ನು ಅಭಿನಂದಿಸಲು ದೋಣಿ ಏರಿದ್ರು ಉಡುಪಿಯ ಡಿಡಿಪಿಐ!

ಕುಂದಾಪುರ: ಇತ್ತೀಚೆಗಷ್ಟೇ ದೋಣಿಯ ಮೂಲಕ ಪರೀಕ್ಷಾ ಕೇಂದ್ರಕ್ಕೆ ಸಾಗಿ ಎಸೆಸ್ಸೆಲ್ಸಿ ಪರೀಕ್ಷೆ ಬರೆದು ರಾಜ್ಯಾದ್ಯಂತ ಸುದ್ದಿಯಾದ ಮರವೆಂತೆಯ ಕುರು ದ್ವೀಪದ ವಿದ್ಯಾರ್ಥಿನಿಯರ ಮನೆಗೆ  ಡಿಡಿಪಿಐ ಭೇಟಿ ನೀಡಿ ಶುಭ ಹಾರೈಸಿದ್ದಾರೆ.

ಉಡುಪಿ ಡಿಡಿಪಿಐ ಎನ್ ಎಚ್ ನಾಗೂರ ಹಾಗೂ ಶಿಕ್ಷಣಾ ಇಲಾಖೆಯ ಅಧಿಕಾರಿಗಳು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದ್ಚಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿ ಸಂಜನಾ ಮತ್ತು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಳಾದ ಶಿಲ್ಪಾ ಅವರನ್ನು ಭೇಟಿಯಾಗಿ ಗೌರವಿಸಿ ಅಭಿನಂದಿಸಿದರು.

ಕೊರೋನಾತಂಕದ ನಡುವೆಯೂ ರಾಜ್ಯ ಸರ್ಕಾರ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಈ ಬಾರಿ ಎಸೆಸ್ಸೆಲ್ಸಿ ಪರೀಕ್ಷೆ ನಡೆಸಿತ್ತು. ಪರೀಕ್ಷಾ ಸಮಯದಲ್ಲಿ ಭಾರೀ ಮಳೆ ಸುರಿದ ಪರಿಣಾಮ ನದಿ ತುಂಬಿ ಹರಿದಿದ್ದು ಮರವಂತೆಯ ಕುರು ದ್ವೀಪದ ಇಬ್ಬರು ವಿದ್ಯಾರ್ಥಿನಿಯರಿಗೆ ಪರೀಲ್ಷಾ ಕೇಂದ್ರಕ್ಕೆ ತೆರಳಲು ತೊಡಕಾಗಿತ್ತು. ಸಮಸ್ಯೆ ಅರಿತ ಡಿಡಿಪಿಐ ಸ್ವತಃ ದೋಣಿಯ ಮೂಲಕ ಇಲಾಖೆಯ ಅಧಿಕಾರಿಗಳೊಂದಿಗೆ ವಿದ್ಯಾರ್ಥಿನಿಯರನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಗಮನ ಸೆಳೆದಿದ್ದರು. ಇದೀಗ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆ ಡಿಡಿಪಿಐ ದೋಣಿಯ ಮೂಲಕ ವಿದ್ಯಾರ್ಥಿನಿಯರ ಮನೆಗೆ ಸಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳ ಮುಂದಿನ ಕಾಲೇಜು ವಿದ್ಯಾಭ್ಯಾಸಕ್ಕೆ ಪೂರಕವಾಗುವಂತೆ ಶಿಕ್ಷಣ ಇಲಾಖೆ ಆರ್ಥಿಕ ಸಹಾಯ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೆÇ್ರೀತ್ಸಾಹ ನೀಡಿದೆ. ಡಿಡಿಪಿಐ ಅವರೊಂದಿಗೆ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ ಪದ್ಮನಾಭ, ಬೈಂದೂರು ಇಸಿಓ ಕರುಣಾಕರ ಶೆಟ್ಟಿ, ಬ್ರಹ್ಮಾವರ ಇಸಿಓ ರಾಘವ ಶೆಟ್ಟಿ, ವಲಯ ಬಿಆರ್ಪಿ ರಾಮಕೃಷ್ಣ, ಸಿ.ಆರ್.ಪಿ ರಾಮನಾಥ, ಅಣ್ಣಪ್ಪ ಶೆಟ್ಟಿ ಮೊದಲಾದವರು ಇದ್ದರು.

ಎನ್ ಎಚ್ ನಾಗೂರ, ಡಿಡಿಪಿಐ ಉಡುಪಿ
ತೀವ್ರ ಬಡತನದ ಮಧ್ಯೆಯೂ ಇಬ್ಬರು ವಿದ್ಯಾರ್ಥಿನಿಯರು ಎಸೆಸ್ಸಲ್ಸಿ ಮುಗಿಸಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಕಲಿಯುವ ಹಂಬಲವಿದ್ದು, ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿದ್ದೇವೆ.

 

Related Posts

Leave a Reply

Your email address will not be published.