ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಡಿವಿಎಸ್ ಸೇರಿದಂತೆ ಆರು ಸಚಿವರು ರಾಜೀನಾಮೆ
ಕೇಂದ್ರ ಸಚಿವ ಸಂಪುಟದ ಪುನರ್ ರಚನೆ ಇಂದು ಸಂಜೆ 6ಕ್ಕೆ ನಡೆಯಲಿದ್ದು, ಹಲವು ಮಂದಿ ಹೊಸಬರಿಗೆ ಸಚಿವ ಸ್ಥಾನ ದೊರೆಯಲಿದೆ. ಹಾಲಿ ಸಚಿವರ ಪೈಕಿ ಕೆಲವೊಬ್ಬರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಆರು ಮಂದಿ ಸಚಿವರು ರಾಜೀನಾಮೆ ನೀಡಿದ್ದಾರೆ.ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್, ರಾಜ್ಯ ಖಾತೆ ಸಚಿವರಾದ ರಾವೋಸಾಹೇಬ್ ದನ್ವೆ, ಸಂಜಯ್ ಧೋತ್ರೆ ಮತ್ತು ದೇಬಶ್ರೀ ಚೌಧರಿ ಸಹ ರಾಜೀನಾಮೆ ನೀಡಿದ್ದಾರೆ.