ಜಾತಿ ಪ್ರಮಾಣಪತ್ರ ನೀಡಲು ವಿಳಂಬ ವಿಚಾರ: ಕುಂಜತ್ತೂರು ವಿಲೇಜ್ ಅಧಿಕಾರಿಯ ವಿರುದ್ಧ ಆಕ್ರೋಶ
ಮಂಜೇಶ್ವರ: ಎಲ್ಲಾ ರೀತಿಯ ದಾಖಲೆಗಳನ್ನು ಹಾಜರು ಪಡಿಸಿದರೂ ಇಲ್ಲ ಸಲ್ಲದ ಕಾರಣಗಳನ್ನು ಮುಂದಿಟ್ಟು ಜಾತಿ ಪ್ರಮಾಣ ಪತ್ರ ನೀಡಲು ವಿಳಂಭ ಮಾಡಿದ ಕುಂಜತ್ತೂರು ವಿಲೇಜ್ ಅಧಿಕಾರಿಯ ತಾತ್ಕಾಲಿಕ ಉಸ್ತುವಾರಿಯಲ್ಲಿರುವ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಪಿಐ ಪಕ್ಷದ ಅಧೀನತೆಯಲ್ಲಿರುವ ಎಐವೈಎಫ್ ಸಂಘಟನೆಯ ಮಂಜೇಶ್ವರ ವಲಯಾಧ್ಯಕ್ಷ ದಯಾಕರ ಹಾಗೂ ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ಕುಂತೂರು, ಮಂಜೇಶ್ವರ ಗ್ರಾ. ಪಂ. ಉಪಾಧ್ಯಕ್ಷ ಸಿದ್ದೀಖ್, ಕಾಂಗ್ರೆಸ್ ನೇತಾರ ಸಕರಿಯ್ಯಾ ಶಾಲಿಮಾರ್ ರವರ ಮಧ್ಯ ಪ್ರವೇಶದೊಂದಿಗೆ ಅಧಿಕಾರಿ ಕರ್ತ್ಯವ್ಯಕ್ಕೆ ಹಾಜರಾಗದೇ ಕೇವಲ ದೂರವಾಣಿ ಕರೆಯಿಂದಲೇ ಜಾತಿ ಪ್ರಮಾಣ ಪತ್ರ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅದೇ ರೀತಿ ಕುಂಜತ್ತೂರು ಕುಚ್ಚಿಕ್ಕಾಡ್ ನಿವಾಸಿ ವಿಶಾಂತ್ ಎಂಬವರು ಉದ್ಯೋಗಕ್ಕೆ ಹಾಜರಾಗಲು ಜಾತಿ ಪ್ರಮಾಣ ಪತ್ರಕ್ಕೆ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಹಲವಾರು ದಿನಗಳಿಂದ ಕಚೇರಿ ಬಳಿ ಅಲೆಯುತಿದ್ದರೂ ಈ ತನಕ ಪ್ರಮಾಣ ಪತ್ರ ಲಭಿಸಿಲ್ಲವೆಂಬುದಾಗಿ ಹೇಳುತ್ತಿದ್ದಾರೆ. ಕುಂಜತ್ತೂರು ಗ್ರಾಮ ಕಚೇರಿಯಲ್ಲಿ ಶಾಶ್ವತವಾಗಿರುವ ಗ್ರಾಮಾಧಿಕಾರಿ ನೇಮಕವಾಗಿಲ್ಲವಾಗಿರುವುದರಿಂದ ತಾತ್ಕಾಲಿಕವಾಗಿ ಕರ್ತವ್ಯದಲ್ಲಿರುವ ಅಧಿಕಾರಿಯೊಬ್ಬ ಈ ರೀತಿಯಾಗಿ ಸಾರ್ವಜನಿಕರನ್ನು ಅಲೆದಾಡಿಸುತ್ತಿರುವ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಕಚೇರಿಗೆ ಆಗಮಿಸುತ್ತಿರುವ ಸಾರ್ವಜನಿಕರಿಗೆ ಕಿರುಕುಳವಾಗುತ್ತಿರುವ ಅಧಿಕಾರಿಯ ವಿರುದ್ಧ ಕ್ರಮ ಜರಗಿಸದೆ ಇದ್ದರೆ ತಾಲೂಕು ಕಚೇರಿ ಮುಂಬಾಗದಲ್ಲಿ ಪ್ರತಿಭಟನೆಗೆ ಮುಂದಾಗಲಿರುವುದಾಗಿ ಎಚ್ಚರಿಸಲಾಗಿದೆ.