ಡಾ.ಶಕೀಲ್ ಚಾರಿಟೇಬಲ್ ಟ್ರಸ್ಟ್ನಿಂದ ಅಕ್ಕಿ ವಿತರಣೆ
ಡಾ.ಶಕೀಲ್ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ ಇದರ ಆಶ್ರಯದಲ್ಲಿ 3000 ಅರ್ಹ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಕಾರ್ಯಕ್ರಮವು ದೇರಳಕಟ್ಟೆಯ ನೇತಾಜಿ ಸುಬಾಶ್ಚಂದ್ರಬೋಸ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕೊಣಾಜೆ ಪೆÇೀಲಿಸ್ ಠಾಣೆಯ ಅಧಿಕ್ಷಕ ಮಲ್ಲಿಕಾರ್ಜುನ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಬೋಳಾ ನರಿಂಗಾನ ಚರ್ಚ್ ನ ಧರ್ಮ ಗುರು ಫಾದರ್ ಮೈಕಲ್ ಮಾತನಾಡಿ ಕರೊನಾ ಶರೀರಕ್ಕೆ ದಾಳಿ ಮಾಡದರೂ ಮನುಷ್ಯತ್ವದ ಮೇಲೆ ದಾಳಿ ಮಾಡಬಾರದು ಎಂದರು.
ಡಾ.ಶಕೀಲ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಡಾ.ಅಬ್ದುಲ್ ಶಕೀಲ್ ಮಾತನಾಡಿ ಕೊರೋನ ಸಂಕಷ್ಟದ ನಡುವೆ ಯಾರೂ ಕೂಡಾ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಡಾ.ಶಕೀಲ್ ಚಾರಿಟೇಬಲ್ ಟ್ರಸ್ಟ್ ಮೂಲಕ 3000 ಬಡ ಕುಟುಂಬಗಳಿಗೆ ಮಸೀದಿ, ಚರ್ಚ್, ದೇವಸ್ಥಾನದ ಮೂಲಕ ಹಂಚಲಾಗಿದೆ ಎಂದು ಹೇಳಿದರು.
ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕೆ.ಶೆಟ್ಟಿ ಉಳಿದೊಟ್ಟು , ರೆಂಜಾಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಸಮಿತಿ ಅಧ್ಯಕ್ಷ ಜಗದೀಶ್ ರೈ, ಬೆಳ್ಮ ಗ್ರಾ.ಪಂ ಆಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಎಸ್ ಕೆಎಸ್ಸೆಸ್ಸಫ್ ಉಳ್ಳಾಲ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ದಾರಿಮಿ, ಉಪಸ್ಥಿತರಿದರು.