ಪ್ರೋಫೆಷನಲ್ ಯೂನಿಸೆಕ್ಸ್ ಸೆಲೂನ್ ಬ್ಲಾಂಡ್ ಉದ್ಘಾಟನೆ

ಬಂಟ್ವಾಳ: ಬಿ.ಸಿ. ರೋಡ್‍ನ ಹೃದಯ ಭಾಗದಲ್ಲಿರುವ ಹೊಟೇಲ್ ಕೃಷಿಮಾ ಇದರ ಪ್ರಥಮ ಮಹಡಿ ಯಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತಹ ವಿನ್ಯಾಸಗೊಳಿಸಿರುವ ಸುಸಜ್ಜಿತ ಹಾಗೂ ಹವಾನಿಯಂತ್ರಿತ ಪ್ರೋಫೆಷನಲ್ ಯೂನಿಸೆಕ್ಸ್ ಸೆಲೂನ್ ಬ್ಲಾಂಡ್ ಶುಭಾರಂಭಗೊಂಡಿತು.ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ನೂತನ ಸೆಲೂನು ಉದ್ಘಾಟನೆಗೊಳಿಸಿದರು. ಸಂಸ್ಥೆಯ ಪ್ರವರ್ತಕ ಮಾತೃಶ್ರಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಮಾತನಾಡಿ ತಾಲೂಕು ಕೇಂದ್ರ ಸ್ಥಾನವಾದ ಬಿ.ಸಿ.ರೋಡು ಸುಂದರೀಕರಣಗೊಳ್ಳುತ್ತಿದ್ದು ಈ ಸಂದರ್ಭ ಹೊಸ ಸೆಲೂನ್ ಮೂಲಕ ಬಿ.ಸಿ.ರೋಡಿನ ಜನರು ಸುಂದರಗೊಳ್ಳುವಂತಾಗಿದೆ.

ಈ ಸಂಸ್ಥೆ ಯಶಸ್ಸಿನತ್ತ ಸಾಗಲಿ ಎಂದು ಶುಭ ಹಾರೈಸಿದರು. ನ್ಯಾಯವಾದಿ ಅಶ್ವನಿ ಕುಮಾರಿ ರೈ, ಶ್ರೀ ಚಂಡಿಕಾ ಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸತೀಶ್ ಭಂಡಾರಿ, ಪ್ರಮುಖರಾದ ರಾಜಶೇಖರ್ ನಾಯಕ್, ಸುದರ್ಶನ ಜೈನ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ, ಮಚ್ಚೇಂದ್ರ ಸಾಲ್ಯಾನ್, ನಾರಾಯಣ ಪೆರ್ನೆ, ಪ್ರಕಾಶ್ ಶೆಟ್ಟಿ, ವಿಜಿತ್ ಕೋಟ್ಯಾನ್ ಮೊದಲಾದವರು ಭೇಡಿ ನೀಡಿದರು.

ಸಂಸ್ಥೆಯ ಪ್ರವರ್ತಕರಾದ ಹರೀಶ್ ಸಾಲ್ಯಾನ್, ರುದ್ರೇಶ್, ಅರ್ಜುನ್ ಉಪಸ್ಥಿತರಿದ್ದರು. ನೂತನವಾಗಿ ಆರಂಭಗೊಂಡ ಬ್ಲಾಂಡ್ ಸಂಸ್ಥೆ ಬಿ.ಸಿ.ರೋಡ್‍ನಲ್ಲಿ ಪ್ರಥಮ ಬಾರಿಗೆ ಸುಸಜ್ಜಿತ ರೀತಿಯಲ್ಲಿ ಆಧುನಿಕ ಸಲಕರಣೆ, ಸೌಂದರ್ಯ ವರ್ಧಕಗಳು ಹಾಗೂ ತಂತ್ರಜ್ಞಾನದಿಂದ ಕೇಶ ವಿನ್ಯಾಸ ಗೊಳಿಸುವುದರೊಂದಿಗೆ ನುರಿತ ಕೇಶ ವಿನ್ಯಾಸಗಾರರನ್ನು ಹೊಂದಿರುವ ಸೆಲೂನ್ ಆಗಿದೆ. ಮಕ್ಕಳ, ಪುರುಷರ ಹಾಗೂ ಮಹಿಳೆಯರ ಸೌಂದರ್ಯ ವೃದ್ಧಿಸುವ ಪ್ರತ್ಯೇಕ ಕೊಠಡಿ ಗಳನ್ನು ಹೊಂದಿದ್ದು ಜನಾಕರ್ಷಣೆ ಪಡೆದುಕೊಂಡಿದೆ.