ತುಳುಕೂಟ ಫೌಂಡೇಶನ್ ನಾಲಾಸೋಪಾರ ನೂತನ ಅಧ್ಯಕ್ಷರಾಗಿ ಶಶಿಧರ ಕೆ. ಶೆಟ್ಟಿ ಆಯ್ಕೆ

ನಾಲಾಸೋಪಾರ;; ತುಳು ಕೂಟ ಫೌಂಡೇಶನ್ ನಾಲಾಸೋಪಾರ ಇದರ ಸಭೆಯು. ಆಗಸ್ಟ್ 31ರಂದು ರಿಜನ್ಸಿ ಬ್ಯಾಂಕ್ವಿಟ್ ಹಾಲ್  ನಾಲಾಸೋಪಾರ (ಪೂರ್ವ )ದಲ್ಲಿ  ತುಳುಕೂಟ ಫೌಂಡೇಶನ್ ಅಧ್ಯಕ್ಷರಾದ  ರಮೇಶ್ ಶೆಟ್ಟಿ ಕಾಪು ಇವರ ಅದ್ಯಕ್ಷತೆಯಲ್ಲಿ ಜರಗಿತು.
ಕಾರ್ಯದರ್ಶಿ ಜಗನಾಥ. ಡಿ. ಶೆಟ್ಟಿ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಸಭೆಯ ಮುಂದಿಟ್ಟರು. ಕೋಶಾಧಿಕಾರಿಯವರ ಅನುಪಸ್ಥಿತಿಯಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಕಾರ್ಯದರ್ಶಿಯವರು ಲೆಕ್ಕಪತ್ರವನ್ನು ಮಂಡಿಸಿದರು ಈ ಸಂದರ್ಭದಲ್ಲಿ 2021-2023 ಅವಧಿಗೆ ಸಂಘದ ನೂತನ ಅಧ್ಯಕ್ಷರನ್ನಾಗಿ ಸಮಾಜ ಸೇವಕರಾದ ಹೋಟೆಲ್ ಉದ್ಯಮಿ ಬಂಟರ ಸಂಘ ಮುಂಬಯಿ ಪಶ್ಚಿಮ ವಲಯದ ಸಮನ್ವಯಕ ಶಶಿಧರ. ಕೆ. ಶೆಟ್ಟಿ  ಯವರನ್ನು ಸರ್ವಾನುಮತದಿಂದ ಅವಿರೋದವಾಗಿಶೆಟ್ಟಿಯವರು ಆಯ್ಕೆಗೊಳಿಸಲಾಯಿತು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆ ಯಾದ ಶಶಿಧರ. ಕೆ. ಶೆಟ್ಟಿ ಇನ್ನಂಜೆಯವರು ಮಾತನಾಡುತ್ತಾ ತುಳುಕೂಟ ಫೌಂಡೇಶನ್ ನಾಲಾಸೋಪಾರ ಈ ಸಂಸ್ಥೆಯಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ಮಾಡಿಕೊಟ್ಟ ಸಂಸ್ಥೆಯ ಎಲ್ಲಾ ಸದಸ್ಯರಿಗೆ  ಕೃತಜ್ಞತೆಗಳು ಜಾತಿಯನ್ನು ಮೀರಿದ ಸಂಸ್ಥೆಯಾಗಿ ಬೆಳೆಯುತ್ತಿರುವ.. ತುಳು ಕೂಟದಲ್ಲಿ ಇಂದಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ರಮೇಶ್ ಶೆಟ್ಟಿ ಕಾಪು ಅವರ ನೇತೃತ್ವದಲ್ಲಿ ಸಂಸ್ಥೆ ಉತ್ತಮವಾಗಿ ಬೆಳೆದಿದೆ ಈ ಸಂಘವನ್ನು ಇನ್ನಷ್ಟು  ಬೆಳೆಸುವಲ್ಲಿ ಸದಸ್ಯರೆಲ್ಲರ ಸಂಪೂರ್ಣ ಸಹಕಾರ ಬೇಕಿದೆ. ನಿಮ್ಮೆಲ್ಲರ ಅಶೋತ್ತರದಂತೆ ಸಂಸ್ಥೆಯನ್ನು ಮುನ್ನಡೆಸಲು ಪ್ರಾಮಾಣಿಕವಾಗಿ ತೊಡಗಿಕೊಳ್ಳುತೇನೆ. ಭವಿಷ್ಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹಿಂದಿನತೆಯೇ ಪ್ರೀತಿ ಸೌಹಾರ್ದತೆಯಿಂದ ಸಂಘಿಕ ಕಾರ್ಯವನ್ನು ಮಾಡೋಣ ಎಂದರು.
ರಮೇಶ್ ಶೆಟ್ಟಿ ಕಾಪು ರವರು ಮಾತನಾಡುತ್ತ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದಿದೆ ಇದನ್ನು ಬೆಳೆಸಿಕೊಳ್ಳಲ್ಲು ಶಶಿ ಅಣ್ಣ ನಂತ ಯಶಸ್ವಿ ನಾಯಕರ ಅಗತ್ಯವಿದೆ.. ಇನ್ನು ಮುಂದೆ ತುಳುಕೂಟ ಫೌಂಡೇಶನ್ ನಾಲಾಸೋಪಾರ ಸಂಸ್ಥೆ ಉತ್ತಮ್ಮ ಸಂಸ್ಥೆಯಾಗಿ ಇತರರಿಗೆ ಮಾದರಿ ಸಂಸ್ಥೆ ಯಾಗಲಿ ಎಂದರು. ವೇದಿಕೆಯಲ್ಲಿ ಅಧ್ಯಕ್ಷ ರಮೇಶ್ ಶೆಟ್ಟಿ ಕಾಪು, ಗೌರವಾಧ್ಯಕ್ಷ ಶಶಿಧರ. ಕೆ. ಶೆಟ್ಟಿ ಇನ್ನಂಜೆ. ಕಾರ್ಯದರ್ಶಿ ಜಗನಾಥ. ಡಿ. ಶೆಟ್ಟಿ. ಜೊತೆ ಕೋಶಾಧಿಕಾರಿ ದಿವಾಕರ ಶೆಟ್ಟಿ ನಿಟ್ಟೆ. ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಮಾ ಸತೀಶ್ ಶೆಟ್ಟಿ, ಸಭೆಯಲ್ಲಿ ವಸಾಯಿ ತಾಲೂಕು ಇದರ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ಸಮಾಜ ಸೇವಕರು ಉಪಸ್ಥಿತರಿದ್ದರು.  ಕೊನೆಗೆ ಕಾರ್ಯದರ್ಶಿ ಧನ್ಯವಾದ ಗೈದರು. ಎಲ್ಲರಿಗೂ ಪ್ರೀತಿ ಭೋಜನದ ವ್ಯವಸ್ಥೆಯ ಮಾಡಲಾಗಿತ್ತು

Related Posts

Leave a Reply

Your email address will not be published.