ನಕಲಿ ಫೇಸ್‍ ಬುಕ್ ಖಾತೆ ಸೃಷ್ಟಿಸಿ ಅವಹೇಳನಕಾರಿ ಪೋಸ್ಟ್, ತನಿಖೆ ನಡೆಸುವಂತೆ ದೂರು ದಾಖಲಿಸಿದ್ದೇನೆ : ರಾಧಾಕೃಷ್ಣ ನಾಯಕ್ ಹಿರ್ಗಾನ

ಕಾರ್ಕಳ: ರಾಜ್ಯ ವ್ಯಾಪ್ತಿ ಸುದ್ದಿಯಾಗಿರುವ ದೇಶದ ಸೈನಿಕರ ವಿರುದ್ಧ ಅವಹೇಳನಕಾರಿ ಪೋಸ್ಟನ್ನು ಹಾಕಿ ಸಂಕಷ್ಟಕ್ಕೆ ಸಿಲುಕಿರುವ ರಾಧಾಕೃಷ್ಣ ನಾಯಕ್ ಹಿರ್ಗಾನ ಅವರು ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್‍ಗಳನ್ನು ಹಾಕಿದ್ದಾರೆ ಈ ಬಗ್ಗೆ ನಾನೇ ಸ್ವಂತ ಬೆಂಗಳೂರಿನ ಉತ್ತರ ಗಂಗಮ್ಮನ ಗುಡಿ ಸಾಯಿಸೈಬರ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ನಡೆಸುವಂತೆ ಮನವಿ ಸಲ್ಲಿಸುತ್ತೇನೆ. ನನಗೆ ಜುಲೈ 9ರಂದು ಕಾರ್ಕಳ ನಗರ ಠಾಣೆಗೆ ಬಂದಿದ್ದು ಅಂದು ತನಿಖೆ ನಡೆಸುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ದೂರು ನೀಡಿದ ದಾಖಲೆ ನೀಡುವಂತೆ ಕೇಳಿದಾಗ ಲಾಕ್ಡೌನ್ ಇದ್ದ ಕಾರಣ ಬೆಂಗಳೂರಿಗೆ ಹೋಗಲು ಸಾಧ್ಯವಿಲ್ಲ ಹೇಳಿದಾಗ ಯಾವುದೇ ತನಿಖೆ ನಡೆಸದೆ ನನ್ನ ಮೇಲೆ ಹಲ್ಲೆ ನಡೆಸಿ ದೂರುದಾರರನ್ನು ಕರಿಸಿ ಅವರ ಸಮ್ಮುಖದಲ್ಲಿ ನನ್ನನ್ನು ನೆಲದ ಮೇಲೆ ಕುಳ್ಳರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ನಾನು ಠಾಣಾ ಅಧಿಕಾರಿಯಿಂದ ಹಲ್ಲೆಗೊಳಗಾಗಿ ನನ್ನ ಆರೋಗ್ಯದಲ್ಲಿ ಏರು-ಪೇರು ಆದಾಗ ಸಂಬಂಧಿಕರು ನನ್ನ ಮಿತ್ರರು ಮಣಿಪಾಲ ಆಸ್ಪತ್ರೆ ದಾಖಲಿಸಿರುತ್ತಾರೆ. ನಾನೇನಾದರೂ ದೇಶದ್ರೋಹದ ಕೆಲಸ ಅಥವಾ ಸೈನಿಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಅನ್ನು ಹಾಕಿದ್ದು ಸಾಬೀತಾದರೆ ಶಿಕ್ಷೆ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.

Related Posts

Leave a Reply

Your email address will not be published.