ನವಮಂಗಳೂರು ಬಂದರು ಸಮಗ್ರ ಅಭಿವೃದ್ಧಿ : ಕೇಂದ್ರ ಸಚಿವ ಸರ್ಬಾನಂ ಸೋನೊವಾಲ್ ಹೇಳಿಕೆ

ಸಾಗರ ಮಾಲಾ ಯೋಜನೆಯಡಿ ನವಮಂಗಳೂರು ಬಂದರನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ಬಂದರು, ನೌಕಾಯಾನ ಮತ್ತು ಜಲ ಸಾರಿಗೆ ಸಚಿವ ಸರ್ಬಾನಂದ ಸೋನೊವಾಲ್ ತಿಳಿಸಿದರು.

ನವ ಮಂಗಳೂರು ಬಂದರು ಟ್ರಸ್ಟ್ (ಎನ್‍ಎಂಪಿಟಿ) ವತಿಯಿಂದ ಪಣಂಬೂರಿನಲ್ಲಿ ನಿರ್ಮಿಸಿರುವ ವ್ಯಾಪಾರ ಅಭಿವೃದ್ಧಿ ಕೇಂದ್ರದ ಲೋಕಾರ್ಪಣೆ ಮತ್ತು ಸ್ವಾತಂತ್ರ್ವ್ಪೊತ್ಸವದ ಅಮೃ ತೋತ್ಸವ ಆಚರಣೆಗೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.

ಸಾಗರಮಾಲಾ ಯೋಜನೆಯಡಿ ಬಂದರಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗು ವುದು. ಗುರುಪುರದ ಫಲ್ಗುಣಿ ನದಿ ಸಮುದ್ರ ಸೇರುವ ಸ್ಥಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಮೀನುಗಾರಿಕೆ ಬೋಟುಗಳಿಗೆ ತುರ್ತು ಸಂದರ್ಭದಲ್ಲಿ ರಕ್ಷಣೆ ಒದಗಿಸುವುದರ ಸಹಿತ ಮೀನುಗಾರರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಂದರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ, ಮಲ್ಯ ಗೇಟ್ ನವೀಕರಣ ಸಹಿತ ಅನೇಕ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಬಂದರಿನಲ್ಲಿ ಸರಕು ನಿರ್ವಹಣೆ ಸುಲಭವಾಗಲಿದೆ. ಸರಕು ರಫ್ತು ಮತ್ತು ಆಮದಿಗೆ ಅನುಕೂಲಕರ ವಾತಾವರಣ ಕಲ್ಪಿಸಲಾಗುವುದು. ಸಮುದ್ರ ಮಾರ್ಗದಲ್ಲಿ ಅಕ್ರಮ, ನಿಷೇಧಿತ ವಸ್ತುಗಳ ಕಳ್ಳಸಾಗಾಟದ ಬಗ್ಗೆ ಮೀನುಗಾರರು ಇಲಾಖೆಗೆ ಸಹಕಾರ ನೀಡುವ ವಿಶ್ವಾಸ ಇದೆ ಎಂದರು.

Related Posts

Leave a Reply

Your email address will not be published.