ಫಾದರ್ ಮುಲ್ಲರ್ ಆಸ್ಪತ್ರೆಯ ವತಿಯಿಂದ ಸೆ.6 ರಂದು ಉಚಿತ ‘ಪೋಸ್ಟ್ ಕೋವಿಡ್ ಫಿಸಿಯೋಥೆರಪಿ’ ಶಿಬಿರ
ಕೋವಿಡ್ -19 ಸೋಂಕಿನಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸೆ.6 ರಂದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪೋಸ್ಟ್ ಕೋವಿಡ್ ಫಿಸಿಯೋಥೆರಪಿ ಕ್ಯಾಂಪ್ ನಡೆಯಲಿದೆ.
ಕೋವಿಡ್ -19 ಸೋಂಕು ತಗುಲಿ ಚೇತರಿಸಿದವರಲ್ಲಿ ಶೇಕಡಾ 87% ವ್ಯಕ್ತಿಗಳಲ್ಲಿ ಆಯಾಸ, ಉಸಿರಾಟದ ತೊಂದರೆ, ಕೀಲು ನೋವು, ಎದೆ ನೋವು ಮತ್ತು ಜೀವನದ ಗುಣಮಟ್ಟವನ್ನು ಕಡಿಮೆ ಮಾಡುವುದು ಸೇರಿದಂತೆ ಉಳಿದಿರುವ ಲಕ್ಷಣಗಳನ್ನು ಹೊಂದಿದೆ. ಇದರಿಂದ ಸ್ನಾಯು ಕಾರ್ಯದಲ್ಲಿ ಸಮಸ್ಯೆ, ಒತ್ತಡದಿಂದ ಅಸ್ವಸ್ಥತೆಗಳು, ಖಿನ್ನತೆ ಇತ್ಯಾದಿಗಳಿಗೆ ಕಾರಣವಾಗಿದೆ. ಪಿಸಿಯೋ ಥೆರಪಿ ಚಿಕಿತ್ಸೆಯು ಈ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸುವ ವ್ಯಕ್ತಿಯ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಫಿಸಿಯೋ ಥೆರಪಿ ಚಿಕಿತ್ಸೆಯ ದಿನದ ಸಂದರ್ಭದಲ್ಲಿ, ಫಿಸಿಯೋಥೆರಪಿ ವಿಭಾಗ, ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸೆಪ್ಟೆಂಬರ್ 6 ರಂದು “ಉಚಿತ ಪೋಸ್ಟ್ ಕೋವಿಡ್ -19 ಫಿಟ್ನೆಸ್ ಮೌಲ್ಯಮಾಪನಕ್ಕಾಗಿ ಕೋವಿಡ್ 19 ಶಿಬಿರವನ್ನು ನಡೆಸುತ್ತಿದೆ.
ಕೋವಿಡ್ 19 ನಿಂದ ಗುಣಮುಖರಾದವರು ಶ್ವಾಸಕೋಶದ ಪರಿಮಾಣವನ್ನು ಸುಧಾರಿಸಲು, ಕೆಮ್ಮನ್ನು ಕಡಿಮೆ ಮಾಡಲು, ಆಯಾಸವನ್ನು ಕಡಿಮೆ ಮಾಡಲು ಮತ್ತು ಕೆಲಸಕ್ಕೆ ಮರಳಲು ಸಾಧ್ಯವಾಗುವಂತೆ ಎದೆಯ ವ್ಯಾಯಾಮ ತಂತ್ರಗಳ ಪ್ರಯೋಜನಗಳನ್ನು ಪಡೆಯಬಹುದು. ಶಿಬಿರದಲ್ಲಿ ನೋಂದಾಯಿಸಲು ಇಚ್ಛಿಸುವವರು 2021 ಸೆ.2ರಿಂದ 4ರೊಳಗೆ 0824 2238289 ಗೆ ಬೆ.8:30 ರಿಂದ-ಸಂಜೆ 4:30 ನಡುವೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.