ಬೆಳಗಾವಿಯಲ್ಲಿ ನಡೆದ ರೈತರ ವಿಭಾಗ ಮಟ್ಟದ ಸಭೆ
ಬೆಳಗಾವಿ ವಿಭಾಗ ಮಟ್ಟದ ಸಭೆಯನ್ನು ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಪ್ರಮುಖವಾಗಿ ಜುಲೈ21 ರ ರೈತ ಹುತಾತ್ಮ ದಿನಾಚರಣೆಯನ್ನು ನರಗುಂದದಲ್ಲಿ ಇತರ ಚಳುವಳಿಗಳ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಸುವುದರ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಪ್ರಮುಖವಾಗಿ ಗೌರವಾಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಕಾರ್ಯಾಧ್ಯಕ್ಷರುಗಳಾದ ಎಮ್.ರಾಮು ಚೆನ್ನಪಟ್ಟಣ, ಮುತ್ತಪ್ಪ ಕೋಮಾರ್ ವಿಭಾಗೀಯ ಉಪಾಧ್ಯಕ್ಷರುಗಳಾದ ಪರಶುರಾಮ ಮಂಟೂರ್, ಮಲ್ಲಿಕಾರ್ಜುನ ಸಂಕನ ಗೌಡ, ವಿಭಾಗೀಯ ಕಾರ್ಯದರ್ಶಿ ಈರನ ಗೌಡ ಪಾಟೀಲ್ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಶ್ರೀಶೈಲ ನಾಯ್ಕ್, ಗದಗ ಜಿಲ್ಲಾಧ್ಯಕ್ಷರಾದ ಚೌಡ ರೆಡ್ಡಿ ಹಿರಿಯ ಮುಖಂಡರಾದ ಕಲ್ಯಾಣ್ ರಾವ್ ಮುಚಳಾಂಬಿ, ಮಲ್ಲಿಕಾರ್ಜುನ ವಾಲಿ, ಶಿವಪುತ್ರ ಜಗ್ ಬಾಳ್ ಮತ್ತು ವಿಭಾಗದ ಜಿಲ್ಲಾ,ತಾಲೂಕು ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಭಾಗವಹಿಸಿದ್ದರು.