ಬೈಕ್ ಮತ್ತು ಒಮ್ನಿ ನಡುವೆ ಅಪಘಾತ:ಬೈಕ್ ಸವಾರ ಗಂಭೀರ
ಬೈಕ್ ಮತ್ತು ಒಮ್ನಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪುತ್ತೂರಿನ ಹೊರವಲಯ ಬನ್ನೂರಿನಲ್ಲಿ ನಡೆದಿದೆ.
ಬೆಳ್ಳಿಪ್ಪಾಡಿ ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರ ಧನಂಜಯ ಗೌಡ ಗಾಯಗೊಂಡ ಬೈಕ್ ಸವಾರ. ಅಪಘಾತವೂ ಬನ್ನೂರಿನ ಆಯೋಧ್ಯಾನಗರದ ಶಿವಪಾರ್ವತಿ ಮಂದಿರ ಬಳಿ ಸಂಭವಿಸಿದೆ.ಗಾಯಾಳುವನ್ನು ಸ್ಥಳೀಯರಾದ ಹಂಝ ಮತ್ತು ರಫೀಕ್ ಬಾಂಬೆ ಎಂಬವರು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಕರಿಸಿದ್ದಾರೆ. ವಿವೇಕಾನಂದ ಕಾಲೇಜು – ಪಡೀಲ್ ರಸ್ತೆಯಲ್ಲಿ ಧನಂಜಯರವರು ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದ ವೇಳೆ ಬನ್ನೂರು ಮಸೀದಿ ಬಳಿ ಅವರ ಮೊಬೈಲ್ ಕೆಳಗೆ ಬಿದ್ದು ಹೋಗಿದೆ. ಅದನ್ನು ಹೆಕ್ಕಿಕೊಂಡು ವಾಪಸ್ಸು ಬೈಕ್ ಚಲಾಯಿಸಿಕೊಂಡು ಮುಂದೆ ತೆರಳುತ್ತಿದ್ದಂತೆ ಬನ್ನೂರು ಶಿವಪಾರ್ವತಿ ಮಂದಿರದ ಬಳಿ ಹಂಪ್ಸ್ ಬಳಿ ಮಾರುತಿ ಓಮ್ನಿಗೆ ಡಿಕ್ಕಿಯಾಗಿದೆ.ಮಾರುತಿ ಓಮ್ನಿಯ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದಿದ್ದೂ ಸವಾರನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.ಡಿಕ್ಕಿಯ ತೀವ್ರತೆಗೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಕ್ಕೆ ಒಳಗಾದ ಧನಂಜಯರನ್ನು ತಕ್ಷಣ ಸ್ಥಳಿಯರಾದ ಹಂಝ ಮತ್ತು ರಫೀಕ್ ಅವರು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರು ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.