ಬೊಕ್ಕಪಟ್ಣ ದೋಸ್ತ್ ಕ್ರಿಕೆಟ್ ಟೀಮ್ ವತಿಯಿಂದ 45ನೇ ಸಾರ್ವಜನಿಕ ಗಣೇಶೋತ್ಸವ ಆಚರಣೆ

ಮಂಗಳೂರಿನ ಬೊಕ್ಕಪಟ್ಣ ದೋಸ್ತ್ ಕ್ರಿಕೆಟ್ ಟೀಮ್ ವತಿಯಿಂದ 45ನೇ ಸಾರ್ವಜನಿಕ ಗಣೇಶೋತ್ಸವವನ್ನ ಸರ್ಕಾರದ ಕೋವಿಡ್ – 19 ನಿಯಯಾವಳಿಯನ್ನ ಪಾಲಿಸಿಕೊಂಡು ಸರಳವಾಗಿ ಆಚರಣೆ ಮಾಡಲಾಗುತ್ತಿದೆ.

ಬೊಕ್ಕಪಟ್ಣದ ಯನ್.ಯಂ. ಸುವರ್ಣರ ವ್ಯಾಯಾಮ ಶಾಲಾ ಮುಂಭಾಗದಲ್ಲಿ ಗಣಪತಿ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಲಾಗಿದ್ದು, ಇಂದು ಮುಂಜಾನೆ ನಂದಾದೀಪ ಬೆಳಗಿಸುವೊಂದರೊಂದಿಗೆ ದೇವರ ಪ್ರತಿಷ್ಟಾಪನೆ ಮಾಡಲಾಯ್ತು. ಇಂದು ಸಂಜೆ ರಂಗಪೂಜೆ, ಮಹಾಪೂಜೆಯೊಂದಿಗೆ ಗಣಪನ ವಿಗ್ರಹವನ್ನು ಶೋಭಾಯಾತ್ರೆಯ ಮೂಲಕ ಬೊಕ್ಕಪಟ್ಣದ ನದಿ ಕಿನಾರೆ ಯಲ್ಲಿ ಜಲಸ್ತಂಭನಗೊಳಿಸಲಾಗುತ್ತದೆ. ಈ ವೇಳೆ ಗೌರವಧ್ಯಕ್ಷ ಲೋಕೇಶ್, ಅಧ್ಯಕ್ಷರಾದ ಕಾರ್ತಿಕ್ ಕರ್ಕೇರ , ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಕುಮಾರ್, ಯತೀಶ್ ಕರ್ಕೇರ, ಕೋಶಾಧಿಕಾರಿಗಳಾದ ದೀಪಕ್ ಕುಮಾರ್, ಧನುಷ್ ಪುತ್ರನ್ ,ಉಪಾಧ್ಯಕ್ಷ ಧೀರಜ್ ಪುತ್ರನ್, ಜೊತೆ ಕಾರ್ಯದರ್ಶಿ ಶೋಧನ್ ಶ್ರೀಯಾನ್, ಕ್ರೀಡಾ ಕಾರ್ಯದರ್ಶಿ ನಂದೇಶ್ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.