ಬೊಕ್ಕಪಟ್ನ-ಕಂಕನಾಡಿ ರೈಲ್ವೇ ಸ್ಟೇಷನ್‍ತನಕ ಹೊಸ ಸರ್ಕಾರಿ ಸಿಟಿ ಬಸ್ ಸೇವೆ ಪ್ರಾರಂಭ

ಮಂಗಳೂರಿನ ಬೊಕ್ಕಪಟ್ನಯಿಂದ ಕಂಕನಾಡಿ ರೈಲ್ವೇ ಸ್ಟೇಷನ್‍ತನಕ ಸರ್ಕಾರಿ ಸಿಟಿ ಬಸ್ ಸೇವೆ ಆರಂಭಗೊಂಡಿದೆ. ನಗರದ ಬೋಳೂರು ಅಮೃತ ವಿದ್ಯಾಲಯಂ ಮೈದಾನದಲ್ಲಿ ನೂತನ ಸರ್ಕಾರಿ ಬಸ್ ರೂಟ್ ಪ್ರಮಾಣಕ್ಕೆ ಚಾಲನೆ ಸಿಕ್ಕಿತ್ತು.

ದಕ್ಷಿಣ ಕನ್ನಡ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಅಮೃತಾನಂದಮಯಿ ಆಶ್ರಮದ ಮೂಲಕವಾಗಿ ಕಂಕನಾಡಿ ರೈಲ್ವೇ ಸ್ಟೇಷನ್ ವರೆಗೆ ಮತ್ತು ಅಲ್ಲಿಂದ ಬೋಳೂರು ಸುಲ್ತಾನ್ ಬತ್ತೇರಿವರೆಗೆ ಸರ್ಕಾರಿ ಸಿಟಿ ಬಸ್ ಸೇವೆಯನ್ನ ಹೊಸದಾಗಿ ಪ್ರಾರಂಭಿಸಲಾಗಿದೆ. ಇನ್ನು ಮಾತಾ ಅಮೃತಾನಂದಮಯಿಯವರ 68ನೇ ಜನ್ಮದಿನದಂದು ಸರ್ಕಾರಿ ಸಿಟಿ ಆರಂಭಿಸಲಾಗಿದೆ. ನಗರದ ಬೋಳೂರು ಅಮೃತ ವಿದ್ಯಾಲಯಂ ಮೈದಾನದಲ್ಲಿ ನೂತನ ಸರ್ಕಾರಿ ಬಸ್ ರೂಟ್ ಪ್ರಮಾಣಕ್ಕೆ ಶಾಸಕ ಡಿ.ವೇದವ್ಯಾಸ್ ಕಾಮತ್ ಹಸಿರು ನಿಶಾನೆ ತೋರಿಸುವ ಜೊತೆಗೆ ಸ್ವತಃ ಶಾಸಕರೇ ಬಸ್ ಚಲಾಯಿಸುವ ಮೂಲಕ ಉದ್ಘಾಟಿಸಿದ್ರು. 

ತದ ಬಳಿಕ ಮಾತನಾಡಿದ ಶಾಸಕರು, ಸರ್ಕಾರಿ ಬಸ್ ರೂಟ್ ಪ್ರಾರಂಭ ಮಾಡಬೇಕೆಂಬ ಸಾರ್ವಜನಿಕರ ಬೇಡಿಕೆಯನ್ನ ಈಡೇರಿಸಲಾಗಿದೆ. ಈ ಭಾಗದಲ್ಲಿ ಸಾಕಷ್ಟು ರಸ್ತೆ ಕಾಮಗಾರಿ ಆಗಲಿದೆ ಎಂದು ಅವರು ಹೇಳಿದರು.
ತದ ಬಳಿಕ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಡಾ| ವಸಂತ್ ಕುಮಾರ್ ಪೆರ್ಲ ಮಾತನಾಡಿ, ಐಸಿಕಾಸಿಕ ಸ್ಥಳ ಸುಲ್ತಾನ್ ಬತೇರಿ, ನದಿ ಕಿನಾರೆ, ತಣ್ಣೀರು ಬಾವಿ ಸಮುದ್ರ ತೀರಕ್ಕೆ ಹೋಗುವವರಿಗೆ ಸರ್ಕಾರಿ ಬಸ್ ಅನುಕೂಲವಾಗಲಿದೆ ಎಂದು ಅವರು ಹೇಳಿದ್ರು.
ಈ ವೇಳೆ ಶಾಸಕರನ್ನು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಭಿಂದಿಸಲಾಯ್ತು. ಈ ಸಂದರ್ಭ ಮಂಗಳೂರು ವಿಭಾಗದ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಎಸ್.ಎನ್, ಆರ್‍ಟಿಐ ಅಧಿಕಾರಿ ವರ್ಣೀಕರ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್, ಸ್ಥಳೀಯ ಕಾರ್ಪೋರೇಟರ್ ಜಗದೀಶ್ ಶೆಟ್ಟಿ, ಎಸ್‍ಸಿಎಸ್ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ|ಜೀವರಾಜ್ ಸೊರಕೆ, ಮಾತಾ ಅಮೃತ ಕ್ಯಾಂಪಸ್‍ನ ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಸ್ಥಳೀಯರಾದ ಮರುಳೀಧರ್ ಶೆಟ್ಟಿ , ಮಾಧವ ಸುವರ್ಣ, ರಾಹುಲ್ ಶೆಟ್ಟಿ , ಯೋಗೀಶ್ ಆಚಾರ್, ಸುರೇಶ್ ಅಮೀನ್, ಬೋಳೂರು ಮೊಗವೀರ ಸಭಾದ ಆರ್.ಪಿ. ಬೋಳಾರ್, ರಂಜನ್ ಕಾಂಚನ್, ಡಾ| ದೇವದಾಸ್ , ಅಮೃತ ವಿದ್ಯಾಲಯಂ ಶಿಕ್ಷಕರು , ಬೊಕ್ಕಪಟ್ನ ಗ್ರಾಮಸ್ಥರು, ಸ್ಥಳೀಯರು ಈ ವೇಳೆ ಭಾಗಿಯಾಗಿದ್ರು.

Related Posts

Leave a Reply

Your email address will not be published.