ಬಿಜೆಪಿ ದಕ್ಷಿಣ ಮಂಡಲದ ವತಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯ ತಿಥಿ

ಜನ ಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯ ತಿಥಿಯ ಕಾರ್ಯಕ್ರಮವು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ವೈಶ್ಯ ಎಜುಕೇಷನ್ ಸೊಸೈಟಿ ಸಭಾಂಗಣದಲ್ಲಿ ಮಂಡಲದ ಅಧ್ಯಕ್ಷರಾದ ವಿಜಯ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ. ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ ಜರಗಿತು.

ಮೂಡ ಅಧ್ಯಕ್ಷರಾದ ಶ್ರೀ ರವಿ ಶಂಕರ್ ಮಿಜಾರ್ ಅವರು ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜೀವನ ಚರಿತ್ರೆ ಬಗ್ಗೆ ಬೌದ್ಧಿಕ ಮಂಡಿಸಿದರು. ಪೂರ್ವ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶ್ರೀ ಅಜಯ್ ಕುಲಶೇಖರ ಅವರು ವೃಕ್ಷಾರೋಹಣ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಮನಪಾ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮನಪಾ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಕೋಶಾಧ್ಯಕ್ಷರಾದ ಶ್ರೀ ಶ್ರೀನಿವಾಸ್ ಶೇಟ್ ಮಂಡಲ ಪದಾಧಿಕಾರಿಗಳು ,ಮನಪಾ ಸದಸ್ಯರು, ಮಹಾಶಕ್ತಿ ಕೇಂದ್ರ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ವಿವಿಧ ಮೋರ್ಚಾದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಾಮಾಜಿಕ ಜಾಲ ತಾಣ ಪ್ರಕೋಷ್ಠದ ಸಂಚಾಲಕರು ಹಾಗೂ ಸಹಸಂಚಾಲಕರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.